ಮಂಗಳೂರು: 23-03-2025 ರಂದು ಸಂಜೆ 4-00 ಗಂಟೆಯಿಂದ 4-10 ರ ಸಮಯಕ್ಕೆ ಸ್ಕೂಟರ್ ಸವಾರನೊಬ್ಬ ಸ್ಕೂಟರ್‌ನ ಹಿಂಬದಿಯ ನಂಬರ್ ಪ್ಲೇಟನ್ನು ಪ್ಲಾಸ್ಟಿಕ್ ಕವರ್ ನಿಂದ ಮರೆಮಾಚಿ, ಹೆಲ್ಮೆಟ್ ಧರಿಸದೆ ಬೆಂದೂರ್‌ವೆಲ್, ಕಂಕನಾಡಿ, ಪಂಪ್‌ವೆಲ್ ನಿಂದಾಗಿ ತೊಕ್ಕೊಟ್ಟು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವ ವಿಡಿಯೋವನ್ನು ಸಾರ್ವಜನಿಕರೊಬ್ಬರು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಬಿಟ್ಟಿದ್ದು, ಸದ್ರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಸ್ಕ್ಕೂಟರ್ ಹಾಗೂ ಸ್ಕೂಟರ್ ಸವಾರನ ಪತ್ತೆಯ ಕುರಿತು ನಗರದ ಸಂಚಾರ ಪೊಲೀಸರು ಕಾರ್ಯಪ್ರವೃತ್ತರಾಗಿ ತಾಂತ್ರಿಕ ಕೌಶಲ್ಯದಿಂದ ಸಂಚಾರ ನಿಯಮವನ್ನು ಉಲ್ಲಂಘಿಸಿರುವ KA-19-HT-1944 ಸ್ಕೂಟರ್‌ನ್ನು ಪತ್ತೆ ಮಾಡಲಾಗಿರುತ್ತದ್ದು, ಸದ್ರಿ ಸ್ಕೂಟರ್‌ನ ದಾಖಲಾತಿಗಳನ್ನು ಪರಿಶೀಲನೆ ಮಾಡಿ, ಸಂಚಾರ ನಿಯಮ ಉಲ್ಲಂಘನೆ ಮಾಡಿರುವ ಸವಾರನ ವಿರುದ್ದ ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಹೆಲ್ಮೆಟ್ ಧರಿಸದೇ, ನಂಬರ್ ಪ್ಲೇಟ್ ಮರೆಮಚಿರುವ ಬಗ್ಗೆ ದೋಷಪೂರಿತ ನಂಬರ್ ಪ್ಲೇಟ್ ಬಳಕೆ, ನಿರ್ಲಕ್ಷ್ಯತನದ ಚಾಲನೆ, ಡಿ.ಎಲ್ ಇಲ್ಲದೇ ಚಾಲನೆ ಹಾಗೂ ಮೊಬೈಲ್ ಫೋನ್ ಬಳಕೆಯ ಕುರಿತು ರೂಪಾಯಿ 5,500/- ದಂಡ ವಿಧಿಸಲಾಗಿದೆ ಎಂದು ಪೊಲೀಸ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.