image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಜೆಸಿಬಿ ಚಾಲಕನ ಅಚಾತುರ್ಯಕ್ಕೆ ಇಬ್ಬರು ಮಹಿಳೆಯರು ಬಲಿ

ಜೆಸಿಬಿ ಚಾಲಕನ ಅಚಾತುರ್ಯಕ್ಕೆ ಇಬ್ಬರು ಮಹಿಳೆಯರು ಬಲಿ

ಬೆಂಗಳೂರು: ರಸ್ತೆ ಕಾಮಗಾರಿ ವೇಳೆ ವಿದ್ಯುತ್ ಕಂಬಕ್ಕೆ ಜೆಸಿಬಿ ಡಿಕ್ಕಿಯಾಗಿ ವಿದ್ಯುತ್ ಕಂಬ ತುಂಡಾಗಿ ಬಿದ್ದ ಪರಿಣಾಮ ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೈಯ್ಯಪ್ಪನಹಳ್ಳಿ (Baiyyappanahalli) ಬಳಿಯ ಸದ್ದುಗುಂಟೆಪಾಳ್ಯದಲ್ಲಿ ನಡೆದಿದೆ. ಸದ್ದುಗುಂಟೆಪಾಳ್ಯ (Sudduguntepalya) ನಿವಾಸಿಗಳಾದ  ಸುಮತಿ ಮತ್ತು ಸೋನಿ ಕುಮಾರಿ ಮೃತ ದುರ್ದೈವಿಗಳು.

ಸೋಮವಾರ ಸಂಜೆ 4 ಗಂಟೆ ಸುಮಾರಿಗೆ ಸದ್ದುಗುಂಟೆಪಾಳ್ಯ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಹಿಳೆಯರ ಮೇಲೆ ವಿದ್ಯುತ್ ಕಂಬ ಮುರಿದು ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಈ ದುರಂತಕ್ಕೆ ಜೆಸಿಬಿ ಡ್ರೈವರ್‌ನ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ. ರಸ್ತೆ ಕಾಮಗಾರಿಯ ವೇಳೆ ಜೆಸಿಬಿ ಡ್ರೈವರ್ ಕಿವಿಗೆ ಹೆಡ್‌ಫೋನ್ ಹಾಕಿಕೊಂಡು ಕೆಲಸ ಮಾಡುತ್ತಿದ್ದ. ಈ ವೇಳೆ ಲೈಟ್ ಕಂಬದ ಬೇರೆ ಕಡೆಗೆ ಕನೆಕ್ಟ್ ಮಾಡಿದ್ದ ವೈಯರ್‌ಗೆ ಜೆಸಿಬಿಯ ಮುಂಭಾಗ ಟಚ್ ಆಗಿದೆ. ಜನ ಜೋರಾಗಿ ಕೂಗಿಕೊಂಡರೂ ಡ್ರೈವರ್ ಕೇಳಿಸಿಕೊಳ್ಳದೇ ವೈಯರ್ ಎಳೆದಿರುವುದೇ ಘಟನೆಗೆ ಕಾರಣ ಎಂದು ಆರೋಪಿಸಲಾಗಿದೆ.

Category
ಕರಾವಳಿ ತರಂಗಿಣಿ