image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಚೆಕ್ ಅಮಾನ್ಯ ಪ್ರಕರಣ:ಬಸ್‌ ಮಾಲಕಿಗೆ ಜೈಲು ಶಿಕ್ಷೆ...

ಚೆಕ್ ಅಮಾನ್ಯ ಪ್ರಕರಣ:ಬಸ್‌ ಮಾಲಕಿಗೆ ಜೈಲು ಶಿಕ್ಷೆ...

ಮಂಗಳೂರು: ಪೆಟ್ರೋಲ್ ಬಂಕ್‌ನಿಂದ ಸಾಲದ ರೂಪದಲ್ಲಿ ಪೆಟ್ರೋಲ್ ಪಡೆದು ಲಕ್ಷಾಂತರ ರೂ. ವಂಚಿಸಿದ ಬಸ್‌ ಮಾಲಕಿಗೆ ಚೆಕ್ ಅಮಾನ್ಯ ಪ್ರಕರಣದಲ್ಲಿ ಮಂಗಳೂರಿನ 5ನೇ ಜೆಎಂಎಫ್‌ಸಿ ನ್ಯಾಯಾಲಯ ಜೈಲು ಶಿಕ್ಷೆ ಪ್ರಕಟಿಸಿದೆ.

ನಗರದ  ಪಿವಿಎಸ್ ವೃತ್ತ ಸಮೀಪದ ಸಿಟಿ ಪ್ಲಾಜಾ ಕಟ್ಟಡದಲ್ಲಿ ಆರೆಂಜ್ ಟೂರ್ಸ್ ಆಂಡ್ ಟ್ರಾವೆಲ್ ಮತ್ತು ಕೆನರಾ ಬಸ್ ಎಂಬ ಹೆಸರಿನಲ್ಲಿ ಉದ್ಯಮ ನಡೆಸುತ್ತಿದ್ದ ಸುಕನ್ಯಾ ಶೆಟ್ಟಿ ಶಿಕ್ಷೆಗೊಳಗಾದ ಬಸ್ ಮಾಲಕಿ.2020ರ ಫೆಬ್ರವರಿಯಲ್ಲಿ ನಗರದ ಪೆಟ್ರೋಲ್ ಬಂಕ್‌ನಿಂದ ಇಂಧನವನ್ನು ಸಾಲದ ರೂಪದಲ್ಲಿ ಪಡೆದುಕೊಂಡಿದ್ದ ಸುಕನ್ಯಾ ಶೆಟ್ಟಿ ಎರಡು ಚೆಕ್ ನೀಡಿದ್ದರು. ಆದರೆ ಅದು ಅಮಾನ್ಯಗೊಂಡ ಕಾರಣ ಪೆಟ್ರೋಲ್ ಬಂಕ್ ಮಾಲಕರು ಮಂಗಳೂರಿನ 5ನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.

ಈ ದೂರನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಾಧೀಶ ಚಿರಾಗ್ ಆರೋಪಿಗೆ ನಾಲ್ಕು ತಿಂಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಪೆಟ್ರೋಲ್ ಬಂಕ್ ಮಾಲಕರ ಪರ ನ್ಯಾಯವಾದಿ ಸುಕೇಶ್ ಕುಮಾರ್ ಶೆಟ್ಟಿ ವಾದಿಸಿದ್ದರು

Category
ಕರಾವಳಿ ತರಂಗಿಣಿ