image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪ್ರಿಯತಮೆಯನ್ನು ಕೊಂದು ನೇಣಿಗೆ ಶರಣಾದ ಪ್ರಿಯತಮ...!

ಪ್ರಿಯತಮೆಯನ್ನು ಕೊಂದು ನೇಣಿಗೆ ಶರಣಾದ ಪ್ರಿಯತಮ...!

ಚಿಕ್ಕಮಗಳೂರು :ಪ್ರಿಯತಮೆಯನ್ನು ಕೊಂದು ಪ್ರಿಯತಮ ಸಾವಿಗೆ ಶರಣಾಗಿರುವ ಘಟನೆ ಚಿಕ್ಕಮಗಳೂರಿನ ದಾಸರಳ್ಳಿ ಬಳಿ ನಡೆದಿದೆ.

ನಿನ್ನೆ ಕಾರಿನಲ್ಲಿ ಯುವತಿಯ ಶವ ಕಂಡುಬಂದಿದ್ದು, ಸ್ವಲ್ಪ ದೂರದ ಮರದಲ್ಲಿ ಯುವಕನ ಶವ ನೇತಾಡುತ್ತಿರುವುದು ಪತ್ತೆಯಾಗಿತ್ತು. ಸಾವಿನ ಸುತ್ತ ಸಾಕಷ್ಟು ಅನುಮಾನಗಳು ಮೂಡಿತ್ತು.ಇದೀಗ ಪೊಲೀಸರು ಪ್ರಕರಣವನ್ನು ಬೇಧಿಸಿದ್ದಾರೆ.

ಯುವಕ ಮಧು, ಯುವತಿ ಪೂರ್ಣಿಮಾ ರಾಮನಗರ ಮೂಲದವರು ಎಂದು ತಿಳಿದುಬಂದಿದ್ದು, ಇಬ್ಬರೂ ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಬುಧವಾರ ಇವರಿಬ್ಬರೂ ಚಿಕ್ಕಮಗಳೂರಿಗೆ ಪ್ರವಾಸಕ್ಕೆ ಬಂದಿದ್ದು, ಯುವತಿಯನ್ನು ಕೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದಿದೆ.

ಬೆಂಗಳೂರು KA 03 AD4628 ನೋಂದಣಿಯ ಬಾಡಿಗೆ ಕಾರಿನಲ್ಲಿ ಈ ಪ್ರೇಮಿಗಳು ಬಂದಿದ್ದಾರೆ. ಯುವತಿಯ ಕತ್ತು ಹಿಸುಕಿರುವ ಗುರುತು ಕಂಡು ಬಂದಿದೆ. ವೇಲ್ ನಿಂದ ಪಕ್ಕದ ಮರದಲ್ಲಿ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

Category
ಕರಾವಳಿ ತರಂಗಿಣಿ