image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಕ್ರಮವಾಗಿ ಕೋಣ ಸಾಗಿಸುತ್ತಿದ್ದ ಪಿಕ್ ಅಪ್ ಅಪಘಾತ...

ಅಕ್ರಮವಾಗಿ ಕೋಣ ಸಾಗಿಸುತ್ತಿದ್ದ ಪಿಕ್ ಅಪ್ ಅಪಘಾತ...

ಉಡುಪಿ: ಅಕ್ರಮವಾಗಿ ಕೋಣ ಸಾಗಿಸುತ್ತಿದ್ದ ಪಿಕ್ ಅಪ್  ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಉಡುಪಿ ನಗರದ ಅಂಬಾಗಿಲಿನಲ್ಲಿ ಸಂಭವಿಸಿದೆ. ಬೆಳಗಾವಿಯಿಂದ ಮಂಜೇಶ್ವರಕ್ಕೆ ಅಕ್ರಮವಾಗಿ ಪಿಕ್ ಅಪ್ ವಾಹನದಲ್ಲಿ ಕೋಣ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದ್ದು, ಅಪಘಾತಗೊಂಡ ವಾಹನ ಪರಿಶೀಲಿಸಿದಾಗ ಹಿಂಸಾತ್ಮಕವಾಗಿ ಕಟ್ಟಿಹಾಕಿದ್ದ 7 ಕೋಣಗಳು ಪತ್ತೆಯಾಗಿವೆ ಎನ್ನಲಾಗಿದೆ.

ವಾಹನದಲ್ಲಿದ್ದ ಇಬ್ಬರ ಪೈಕಿ ಓರ್ವ ಪರಾರಿಯಾಗಿದ್ದು, ಓರ್ವನನ್ನ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Category
ಕರಾವಳಿ ತರಂಗಿಣಿ