image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರು ಮಸಾಜ್ ಪಾರ್ಲರ್ ದಾಳಿ : ಪ್ರಸಾದ್ ಅತ್ತಾವರ್ ಸೇರಿ 11 ಮಂದಿಗೆ ಜಾಮೀನು ಮಂಜೂರು..!

ಮಂಗಳೂರು ಮಸಾಜ್ ಪಾರ್ಲರ್ ದಾಳಿ : ಪ್ರಸಾದ್ ಅತ್ತಾವರ್ ಸೇರಿ 11 ಮಂದಿಗೆ ಜಾಮೀನು ಮಂಜೂರು..!

ಮಂಗಳೂರು:  ನಗರದ ಬಿಜೈಯಲ್ಲಿರುವ ಕಲರ್ಸ್ ಯೂನಿಸೆಕ್ಸ್ ಸಲೂನ್ ನ ಮೇಲೆ ದಿನಾಂಕ 23.01.2025 ರಂದು 'ರಾಮಸೇನಾ ಕರ್ನಾಟಕ' ಸಂಘಟನೆಯ ಸದಸ್ಯರು ನಡೆಸಿದ ದಾಳಿಯಿಂದಾಗಿ ಬಂಧಿತರಾಗಿದ್ದ 14 ಆರೋಪಿಗಳ ಪೈಕಿ ಪ್ರಸಾದ್ ಅತ್ತಾವರ್ ಸೇರಿ 11 ಜನ ಆರೋಪಿಗಳಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಶರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ದಿನಾಂಕ 23.01.2025 ರಂದು ಮಂಗಳೂರಿನ ಬಿಜೈ, ಕೆ.ಎಸ್.ಆರ್.ಟಿ.ಸಿ. ಬಳಿಯ ಆದಿತ್ಯ ಕಾಂಪ್ಲೆಕ್ಸ್‌ ನಲ್ಲಿರುವ 'ಕಲರ್ಸ್ ಯೂನಿಸೆಕ್ಸ್' ಸಲೂನ್ ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿತ್ತು ಎಂದು ಆರೋಪಿಸಿ ಪ್ರಸಾದ್ ಅತ್ತಾವರ್ ನೇತೃತ್ವದಲ್ಲಿ 'ರಾಮಸೇನಾ ಕರ್ನಾಟಕ' ಸಂಘಟನೆಯವರು ಧಾಳಿ ನಡೆಸಿ ಪೀಠೋಪಕರಣಗಳನ್ನು ಜಖಂ ಮಾಡಿ ಕೊಲೆ ಯತ್ನ ಹಾಗೂ ದರೋಡೆಯಂತಹ ಅಪರಾಧ ಎಸಗಿರುತ್ತಾರೆ ಎಂದು ಸಲೂನ್ ನ ಮಾಲಿಕ ಮಂಗಳೂರಿನ ಬರ್ಕೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸದ್ರಿ ದೂರಿನ ಆಧಾರದಲ್ಲಿ ಬರ್ಕೆ ಪೊಲೀಸರು ಎಫ್.ಐ.ಆರ್. ದಾಖಲಿಸಿ. ಪ್ರಸಾದ್ ಅತ್ತಾವರ ಸೇರಿ ಒಟ್ಟು 14 ಮಂದಿಯನ್ನು ಬಂಧಿಸಿ ಮಂಗಳೂರಿನ 6ನೇ ಜೆ.ಎಂ.ಎಫ್.ಸಿ. ನ್ಯಾಯಾಲಯದ ಮುಂದೆ ದಿನಾಂಕ 24.01.2025 ರಂದು ಹಾಜರು ಪಡಿಸಿದ್ದು, ಎಲ್ಲಾ ಆರೋಪಿಗಳಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿತ್ತು. ಈ ನಡುವೆ ಪ್ರಸಾದ್ ಅತ್ತಾವರ್ ಹಾಗೂ ಇತರ ಆರೋಪಿಗಳು ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆರೋಪಿಗಳ ಪರ ನ್ಯಾಯವಾದಿ ಮಯೂರ ಕೀರ್ತಿ ದಿನಾಂಕ 01.02.2025 ರಂದು ವಾದ ಮಂಡಿಸಿದ್ದು, ಮಾನ್ಯ ನ್ಯಾಯಲಯವು ಜಾಮೀನು ಅರ್ಜಿಯ ಆದೇಶಕ್ಕಾಗಿ ಪ್ರಕರಣವನ್ನು ಮುಂದೂಡಿದ್ದು ದಿನಾಂಕ 05.02.2025 ರಂದು ಮಾನ್ಯ ನ್ಯಾಯಾಲಯವು ಪ್ರಸಾದ್ ಅತ್ತಾವರ್ ಹಾಗೂ ಜಾಮೀನು ಅರ್ಜಿ ಸಲ್ಲಿಸಿದ ಇತರ 11 ಮಂದಿ ಆರೋಪಿಗಳಿಗೆ ಶರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

Category
ಕರಾವಳಿ ತರಂಗಿಣಿ