ಮಂಗಳೂರು: ರಾತ್ರಿ ಪಾಳಿಯಲ್ಲಿ ಕರ್ತವ್ಯದಲ್ಲಿದ್ದ ಉಳ್ಳಾಲ ಠಾಣಾ ಪಿಎಸ್ಸೆಯ ಪೊಲೀಸ್ ವಾಹನದಿಂದಲೇ ವಾಕಿಟಾಕಿ ಕಳವಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಜ.22ರಂದು ಉಳ್ಳಾಲ ಪೊಲೀಸ್ ಠಾಣಾ ಪಿಎಸ್ಸೆ ಧನರಾಜ್ ಅವರು ರಾತ್ರಿ ಪಾಳಿ ಕರ್ತವ್ಯದಲ್ಲಿದ್ದರು.ಈ ವೇಳೆ ಅವರು ತಮ್ಮ ಇಲಾಖೆಗೆ ಸೇರಿರುವ ಬೀಟ್-3 ಎಂದು ಬರೆದಿದ್ದ ಮೋಟೊರೋಲ ಕಂಪೆನಿಯ ವಾಕಿಟಾಕಿಯನ್ನು ಕೊಂಡೊಯ್ದಿದ್ದರು. ಪಂಪ್ ವೆಲ್ ಗೆ ತೆರಳಿದ್ದ ಅವರು ಜೀಪನ್ನು ತಾನೇ ಚಲಾಯಿಸಿ ಮತ್ತೆ ಉಳ್ಳಾಲದ ಕಡೆಗೆ ಹಿಂತಿರುಗಿ ಬಂದಿದ್ದಾರೆ. ಅದೇ ದಿನ ಮಧ್ಯರಾತ್ರಿ 11.45ರ ವೇಳೆ ದಾರಿ ಮಧ್ಯದ ಕಲ್ಲಾಪು ಗ್ಲೋಬಲ್ ಮಾರ್ಕೆಟ್ ಬಳಿಯ ಹೆದ್ದಾರಿ ಬದಿಯಲ್ಲಿ ಜನರು ಗುಂಪು ಸೇರಿದ್ದರು ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಅಲ್ಲಿಗೆ ತೆರಳಿದ ಅವರು ಪೊಲೀಸ್ ವಾಹನವನ್ನು ನಿಲ್ಲಿಸಿದ್ದಾರೆ. ಈ ಸಂದರ್ಭ ತನ್ನ ವಾಕಿಟಾಕಿಯನ್ನು ಪೊಲೀಸ್ ಜೀಪಿನ ಸೀಟಿನಲ್ಲಿ ಇಟ್ಟು ಪಿಎಸ್ಸೈ ಧನರಾಜ್ ವಾಹನದಿಂದ ಇಳಿದು ಹೆದ್ದಾರಿಯಲ್ಲಿ ಜಮಾಯಿಸಿದ್ದ ಜನರನ್ನ ವಿಚಾರಿಸಿ ಮತ್ತೆ ಜೀಪ್ ಏರಿದಾಗ ವಾಕಿಟಾಕಿ ಕಳವಾಗಿದೆ.
ಉಳ್ಳಾಲ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.