ಮಡಿಕೇರಿ:ಕಟ್ಟೆಮಾಡು ಶ್ರೀ ಮೃತ್ಯಂಜಯ ದೇವಾಲಯದ ಅರ್ಚಕರ ಮೇಲೆ ಹಲ್ಲೆ ನಡೆದಿದಗದು, ದೂರು ದಾಖಲಾಗಿದೆ. ಹಲ್ಲೆ ಮಾಡಿರುವುದನ್ನು ಕೊಡಗು ಬ್ರಾಹ್ಮಣ ಸಮಾಜ ಖಂಡಿಸಿದ್ದು, ಈ ಸಂಬಂಧ ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ಅಧ್ಯಕ್ಷ ರಾಮಚಂದ್ರ ಮೂಗೂರು ಖಂಡನೆ ವ್ಯಕ್ತ ಪಡಿಸಿದ್ದಾರೆ.
ಬ್ರಾಹ್ಮಣ ಸಮಾಜದ ಪ್ರಮುಖರು ಮಡಿಕೇರಿಯಲ್ಲಿರುವ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವ ಅರ್ಚಕ ವಿಪ್ಪೇಶ್ ಭಟ್ ಅವರಿಗೆ ಸಾಂತ್ವಾನ ಹೇಳಿ ಅವರ ಕುಟುಂಬಸ್ಥರಿಗೂ ಧೈರ್ಯ ತುಂಬಿದರು. ಘಟನೆಗೆ ಕಾರಣರಾದವರ ವಿರುದ್ಧ ತಡ ಮಾಡದೆ ಕಠಿಣ ಕಾನೂನು ಕ್ರಮಕೈಗೊಳ್ಳುವಂತೆ ಬ್ರಾಹ್ಮಣ ಸಮಾಜದ ಪ್ರಮುಖರು ಒತ್ತಾಯ ಮಾಡಿದ್ದಾರೆ.
ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಕಾರ್ಯದರ್ಶಿ ಜಗದೀಶ್ ಸೋಮಯಾಜಿ, ಪ್ರಮುಖರಾದ ಬಿ.ಜಿ. ಅನಂತಶಯನ, ಜಿ.ಆರ್. ರವಿಶಂಕರ್, ಅರುಣ್ ಸೋಮಯಾಜಿ, ವಕೀಲ ಎಂ.ಎನ್ ಶಶಿಕಾಂತ್ ಹಾಜರಿದ್ದರು.