image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪತಿಯನ್ನು ತೊರೆದು ಪರಪುರುಷನ ಜೊತೆ ಹೋದ ಮಹಿಳೆ ಸೂಸೈಡ್ - ನಂಬಿಸಿ ಕೈಕೊಟ್ಟ ಪ್ರಿಯಕರ ಅರೆಸ್ಟಸ್ !

ಪತಿಯನ್ನು ತೊರೆದು ಪರಪುರುಷನ ಜೊತೆ ಹೋದ ಮಹಿಳೆ ಸೂಸೈಡ್ - ನಂಬಿಸಿ ಕೈಕೊಟ್ಟ ಪ್ರಿಯಕರ ಅರೆಸ್ಟಸ್ !

ದಾರವಾಡ: ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂ ಮೂಲಕ ಪ್ರೀತಿ ಶುರುವಾಗಿ ನಂತರ ಆತ್ಮಹತ್ಯೆಯಲ್ಲಿ ಕೊನೆಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಆತ್ಮಹತ್ಯೆಗೆ ಶರಣಾದ ಗೃಹಿಣಿಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ಮಹಿಳೆಯ ಶ್ವೇತಾ ಕುಟುಂಬಸ್ಥರು ಈ ಕುರಿತು ಧಾರವಾಡ ಉಪನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು

ಇಲ್ಲಿನ ಶಿವಳ್ಳಿ ಗ್ರಾಮದ ವಿಜಯ್ ನಾಯ್ಕ‌ರ್ ಎಂಬ ಆರೋಪಿಯನ್ನು ಸದ್ಯ ಧಾರವಾಡ ಪೊಲೀಸರು ಬಂಧಿಸಿದ್ದಾರೆ. ಇನ್ನು ಆತ್ಮಹತ್ಯೆಗೆ ಶರಣಾದ ಮಹಿಳೆ ಶ್ವೇತಾ  ಈತನಿಂದ ತನ್ನ ಗಂಡನ ಬಳಿ ವಿಚ್ಛೇದನ ಪಡೆದಿದ್ದಳು ಎನ್ನಲಾಗಿದೆ.

ಈ ಪ್ರಿಯಕರರನ್ನೇ ನಂಬಿಕೊಂಡು ಪತಿಯಿಂದ ದೂರವಾಗಿದ್ದ ಶ್ವೇತಾಗೆ ಆರೋಪಿ ವಿಜಯ್ ಮದುವೆಯಾಗುವುದಾಗಿ ನಂಬಿಸಿದ್ದ ಎನ್ನಲಾಗಿದೆ. ಆದ್ರೆ ಆತನ ಮನೆಯವರು ಒಪ್ಪದ ಕಾರಣ ಮದುವೆಯಾಗಲು ಸಾಧ್ಯವಿಲ್ಲ ಎಂದಾಗ ಮಹಿಳೆ ಆತ್ಮ ಹತ್ಯೆಯ ದಾರಿ ಹಿಡಿದ್ದಾಳೆ ಎನ್ನಲಾಗಿದೆ.

Category
ಕರಾವಳಿ ತರಂಗಿಣಿ