ಮಂಗಳೂರು: ಕಂಪನಿ ಮಾಲಕರು ಹಾಗೂ ಕಚ್ಚಾ ವಸ್ತು ಪೂರೈಕೆದಾರರ ನಡುವೆ ವ್ಯವಹಾರ ಮನಸ್ತಾಪದಿಂದ ಕಚ್ಚಾ ವಸ್ತು ಪೂರೈಕೆದಾರರು 2 ಕೋಟಿ ಹಣ ನೀಡುವಂತೆ ಬೆದರಿಕೆ ಹಾಕಿದ ಕುರಿತಂತೆ ಕಂಪನಿ ಮಾಲಕ ವಿನೀತ್ ಕೊಟ್ಯಾನ್ ಅವರು ಸಿದ್ದಪ್ಪ ಮತ್ತು ಜಯಶೇಖರ್ ಎಂಬವರ ವಿರುದ್ದ ಪಣಂಬೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ
ಬೈಕಂಪಾಡಿಯಲ್ಲಿ ಫುಡ್ ಪ್ಯಾಕೇಜಿಂಗ್ ಸಂಬಂಧಿಸಿದ ಕಂಪನಿ ನಡೆಸುತ್ತಿದ್ದ ವಿನೀತ್ ಅವರು ಕೋವಿಡ್ ಸಂದರ್ಭದಲ್ಲಿ ಸಮಸ್ಯೆಗೆ ಈಡಾಗಿದ್ದರು. ಹಣಕಾಸು ಕುರಿತಂತೆ ವ್ಯಾಜ್ಯ ಉಂಟಾಗಿ ಕಚ್ಚಾ ವಸ್ತು ಪೂರೈಸುತ್ತಿದ್ದ ಸಿದ್ದಪ್ಪ ಮತ್ತು ಜಯಶೇಖರ್ ದಾವೆ ಹೂಡಿದದ್ದರು.ಅಲ್ಲದೆ ಪ್ರಾಪರ್ಟಿ ಅಟ್ಯಾಚ್‌ಮೆಂಟ್ ಅರ್ಜಿ ಸಲ್ಲಿಸಿ ಆದೇಶವನ್ನೂ ನ್ಯಾಯಾಲಯದಿಂದ ಪಡೆದುಕೊಂಡಿದ್ದರು.
ಈ ನಡುವೆ ವಿನೀತ್ ಅವರು ಕಂಪನಿಯನ್ನು ಮೂರನೇ ವ್ಯಕ್ತಿ ಮಾರಾಟ ಮಾಡಿದ್ದರು. ಆದರೆ ಕಳೆದ ಆರು ತಿಂಗಳ ಹಿಂದೆ ಈ ಇಬ್ಬರು 2 ಕೋಟಿ ಹಣ ಪಾವತಿಸಿ ಸೆಟಲ್ ಮೆಂಟ್ ಮಾಡಬೇಕು ಎಂದು ಬೆದರಿಕೆ ಕರೆ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಪಣಂಬೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.