ಮೈಸೂರು: ಹಾಡಹಗಲೇ ಉದ್ಯಮಿಯ ಕಾರನ್ನು ಅಡ್ಡಗಟ್ಟಿ ದರೋಡೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಜಯಪುರ ಹೋಬಳಿಯ ಹಾರೋಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಮುಸುಕುಧಾರಿಗಳ ಗ್ಯಾಂಗ್ ಹಾಡಹಗಲೇ ಈ ಕೃತ್ಯ ನಡೆಸಿದೆ. ಕೇರಳದ ಮೂಲದ ಉದ್ಯಮಿಯ ಕಾರು, ಹಣ, ಹಾಗೂ ಮೊಬೈಲ್ ಕಿತ್ತುಕೊಂಡ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ರಸ್ತೆಯಲ್ಲಿ ಬರುತ್ತಿದ್ದ ಉದ್ಯಮಿಯ ಕಾರನ್ನು ಅಡ್ಡಗಟ್ಟಿ ಕಾರು ಸಮೇತ ಆತನ ಬಳಿಯಿದ್ದ ಹಣ, ಮೊಬೈಲ್ ಕಸಿದು ಆರೋಪಿಗಳು ಪರಾರಿ ಆಗಿದ್ದಾರೆ.