image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಗನಿಗೆ ಗುರಿಯಿಟ್ಟ ಕೋವಿಗೆ ಪತ್ನಿ ಬಲಿ - ವಿಷ ಸೇವಿಸಿ ಪತಿ ಆತ್ಮಹತ್ಯೆ

ಮಗನಿಗೆ ಗುರಿಯಿಟ್ಟ ಕೋವಿಗೆ ಪತ್ನಿ ಬಲಿ - ವಿಷ ಸೇವಿಸಿ ಪತಿ ಆತ್ಮಹತ್ಯೆ

ಪುತ್ತೂರು: ಮನೆಯಲ್ಲಿ ನಡೆದ ಗಲಾಟೆ ವೇಳೆ ಮಗನಿಗೆ ಗುರಿಯಿಟ್ಟ ಕೋವಿಗೆ ಪತ್ನಿ ಸಾವನಪ್ಪಿದ್ದು, ಬಳಿಕ ಮನನೊಂದು ಆರೋಪಿ ಪತಿಯೂ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಸುಳ್ಯದ ನೆಲ್ಲೂರು ಕೆಮ್ರಾಜೆ ಎಂಬಲ್ಲಿ ನಡೆದಿದೆ. ಕೋಡಿಮಜಲು ನಿವಾಸಿ, ರಾಮಚಂದ್ರ ಗೌಡ ಅಲಿಯಾಸ್ ಚಂದ್ರ(53) ಕೊಲೆ ಕೃತ್ಯ ಎಸಗಿ ಆತ್ಮಹತ್ಯೆ ಮಾಡಿಕೊಂಡವರು.ಅವರ ಪತ್ನಿ ವಿನೋದಾ(43) ಕೊಲೆಯಾದವರು.

ಆರೋಪಿ ರಾಮಚಂದ್ರ ಪ್ರತಿದಿನವೂ ಕುಡಿದು ಬಂದು ಪತ್ನಿ ವಿನೋದ ಜೊತೆ ಜಗಳವಾಡುತ್ತಿದ್ದ, ನಿನ್ನೆ ಮತ್ತೆ ಗಲಾಟೆ ಆರಂಭವಾದಾಗ ಮಗ ಪ್ರಶಾಂತ್ ಗಲಾಟೆ ತಡೆಯಲು ಮುಂದಾಗಿದ್ದ, ಈ ಸಂದರ್ಭದಲ್ಲಿ ರಾಮಚಂದ್ರ ಅವರು ತಮ್ಮ ಪರವಾನಗಿ ಇರುವ ಕೋವಿಯನ್ನು ಮಗನಿಗೆ ಗುರಿಯಾಗಿರಿಸಿದ್ದರು, ಈ ವೇಳೆ ಪತ್ನಿ ಅಡ್ಡ ಬಂದ ಹಿನ್ನಲೆ ಕೋವಿಯಿಂದ ಹಾರಿದ ಗುಂಡು ಸೀದಾ ವಿನೋದಾ ಅವರ ಎದೆಗೆ ನುಗ್ಗಿ ಸ್ಥಳದಲ್ಲೇ ಅವರು ಸಾವನಪ್ಪಿದ್ದಾರೆ. ಬಳಿಕ ಇದರಿಂದ ಮನನೊಂದ ಆರೋಪಿ ಪತಿ ರಾಮಚಂದ್ರ ಗೌಡ ರಬ್ಬರ್ ಶೀಟ್ ಮಾಡಲು ಬಳಸುವ ಆಸಿಡ್ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.ಸುಳ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Category
ಕರಾವಳಿ ತರಂಗಿಣಿ