image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಆನ್‌ಲೈನ್‌ ಟ್ರೇಡಿಂಗ್‌ನಲ್ಲಿ ಹೂಡಿಕೆ ಹೆಸರಿನಲ್ಲಿ ಮಹಿಳೆಗೆ ವಂಚನೆ: ದೂರು ದಾಖಲೆ

ಆನ್‌ಲೈನ್‌ ಟ್ರೇಡಿಂಗ್‌ನಲ್ಲಿ ಹೂಡಿಕೆ ಹೆಸರಿನಲ್ಲಿ ಮಹಿಳೆಗೆ ವಂಚನೆ: ದೂರು ದಾಖಲೆ

ಮಂಗಳೂರು:ಆನ್‌ಲೈನ್‌ ಟ್ರೇಡಿಂಗ್‌ನಲ್ಲಿ ಹೂಡಿಕೆ ಹೆಸರಿನಲ್ಲಿ ಮಹಿಳೆಗೆ 15.27 ಲಕ್ಷ ರೂ. ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ತನ್ನ ಫೇಸ್‌ಬುಕ್‌ಗೆ ಆನ್‌ಲೈನ್‌ ಟ್ರೇಡಿಂಗ್‌ನ ಮಾಹಿತಿಯುಳ್ಳ ಮೆಸೇಜ್ ಬಂದಿದ್ದು, ಅದರಲ್ಲಿರುವ ಸಂಖ್ಯೆಗೆ ತಾನು ಸಂಪರ್ಕಿಸಿದಾಗ ವಾಟ್ಸ್ಆ್ಯಪ್‌ಗೆ ಲಿಂಕ್ ಕಳುಹಿಸಿದ್ದಾರೆ. ಆ ಲಿಂಕ್‌ನ್ನು ತೆರೆದಾಗ ತನಗೆ ಆನ್‌ಲೈನ್ ಟ್ರೇಡಿಂಗ್ ಹಾಗೂ ಲಾಭದ ಬಗ್ಗೆ ಹೇಳಿದ್ದು,ಅದನ್ನು ನಂಬಿದ ತಾನು ಹಂತ ಹಂತವಾಗಿ 15,27,535 ರೂ.ಗಳನ್ನು ಹೂಡಿಕೆ ಮಾಡಿದ್ದೆ. ಅದನ್ನು ವಾಪಸ್‌ ಪಡೆಯಲು ಯತ್ನಿಸಿದಾಗ ಇನ್ನೂ ಹೆಚ್ಚುವರಿಯಾಗಿ 5 ಲ.ರೂ.ವನ್ನು ಹೂಡಿಕೆ ಮಾಡುವಂತೆ ತಿಳಿಸಲಾಯಿತು. ತನ್ನ ಬಳಿ ಅಷ್ಟು ಹಣವಿಲ್ಲದ ಕಾರಣ ತಾನು ಮನೆಯವರಲ್ಲಿ ವಿಷಯ ತಿಳಿಸಿದೆ. ಅದರಂತೆ ಮನೆ ಮಂದಿ ಪರಿಶೀಲನೆ ನಡೆಸಿದಾಗ ತನಗೆ ನಕಲಿ ಟ್ರೇಡಿಂಗ್ ಆ್ಯಪ್ ಮೂಲಕ ಮಾಯಾಂಕ್ ಸಿಂಗ್ ಚಾಂದೇಲ್ ಮತ್ತು ರಜನಿಕಾಂತ್ ಥ್ಯಾಕರ್ ಎಂಬವರು ವಂಚನೆ ಮಾಡಿರುವುದು ಗೊತ್ತಾಗಿದೆ ಎಂದು ಬಂದರ್‌ ಠಾಣೆಗೆ ಮಹಿಳೆ ನೀಡಿದ್ದ ದೂರಿನಲ್ಲಿ ತಿಳಿಸಲಾಗಿದೆ.

Category
ಕರಾವಳಿ ತರಂಗಿಣಿ