ಮಂಗಳೂರು : ವ್ಯಕ್ತಿಯೊಬ್ಬರು ನಿಜವಾದ ರಿವಾಲ್ವರ್ ನ್ನು ಆಟದ ಸಾಮಾನು ಎಂದು ಅದರ ಟ್ರಿಗರ್ ಒತ್ತಿದ ಪರಿಣಾಮ ಹೊಟ್ಟೆ ಗುಂಡು ಹೊಡೆದು ಆಸ್ಪತ್ರೆಗೆ ದಾಖಲಾದ ಘಟನೆ ಮಂಗಳೂರು ಹೊರವಲಯದ ವಾಮಂಜೂರಿನಲ್ಲಿ ವರದಿಯಾಗಿತ್ತು.
ವಾಮಂಜೂರಿನ ಸೆಕೆಂಡ್ ಹ್ಯಾಂಡ್ ಅಂಗಡಿಯೊಂದರಲ್ಲಿ ಭಾಸ್ಕರ್ ಎಂಬವರು ಗನ್ ಅನ್ನು ಟೇಬಲ್ ಮೇಲಿರಿಸಿ ವಾಶ್ ರೂಂ ಗೆ ತೆರಳಿದ್ದರು. ಈ ವೇಳೆ ಸೆಕೆಂಡ್ ಹ್ಯಾಂಡ್ ಬಜಾರ್ ಗೆ ಖರೀದಿಗೆ ಬಂದಿದ್ದ "ಸಫ್ಘಾನ್" ಆಟದ ವಸ್ತುವೆಂದು ಭಾವಿಸಿ ಹೊಟ್ಟೆಯ ಮೇಲಿಟ್ಟು ಶೂಟ್ ಮಾಡಿಕೊಂಡಿದ್ದಾರೆ.ಪರಿಣಾಮ ಸಫ್ಘಾನ್ ಹೊಟ್ಟೆಗೆ ಗುಂಡು ತಗುಲಿ ಗಾಯಗೊಂಡಿದ್ದಾರೆ. ಸದ್ಯ ಗಾಯಾಳು ಪಡೀಲ್ ಜನಪ್ರೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆದರೆ ಅಸಲಿ ಕತೆ ಬೇರೆಯಾಗಿದ್ದು, ಅಂಗಡಿ ಮಾಲಿಕ ಅಕ್ರಮ ಗನ್ ಹೊಂದಿದ್ದು, ಅದನ್ನು ಸ್ವಚ್ಚಗೊಳಿಸುವ ಸಂದರ್ಭದಲ್ಲಿ ಗುಂಡು ಹಾರಿ ಎದುಗಡೆ ಕುಳಿತಿದ್ದ ವ್ಯಕ್ತಿಗೆ ತಗುಲಿದ್ದು, ಆ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.