image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪುತ್ತಿಲ ಪರಿವಾರದ ಸದಸ್ಯನಿಂದ ವ್ಯಕ್ತಿಗೆ ಬೆದರಿಕೆ ಕರೆ: ದೂರು ದಾಖಲು

ಪುತ್ತಿಲ ಪರಿವಾರದ ಸದಸ್ಯನಿಂದ ವ್ಯಕ್ತಿಗೆ ಬೆದರಿಕೆ ಕರೆ: ದೂರು ದಾಖಲು

ಪುತ್ತೂರು: ಹಿಂದು ಜಾಗರಣ ವೇದಿಕೆ ಪುತ್ತೂರು ತಾಲೂಕು ಸಮಿತಿ ಸದಸ್ಯರೊಬ್ಬರಿಗೆ ವ್ಯಕ್ತಿಯೊಬ್ಬರು ಬೆದರಿಕೆ ಕರೆ ಮಾಡಿದ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ.

ಹಿಂದು ಜಾಗರಣ ವೇದಿಕೆ ತಾಲೂಕು ಸಮಿತಿ ಸದಸ್ಯ ನರಿಮೊಗರು ಗ್ರಾಮದ ಮುಕ್ವೆ ನಿವಾಸಿ ಸುಭಾಷ್ ರೈ ಅವರು ದೂರುದಾರರಾಗಿದ್ದು, ಅವರಿಗೆ ಮುಂಡೂರು ಗ್ರಾಮದ ಪುತ್ತಿಲ ಪರಿವಾರದ ಧನಂಜಯ ಕಲ್ಲಮ್ಮ ಎಂಬವರು ಬೆದರಿಕೆ ಕರೆ ಮಾಡಿರುವುದಾಗಿ ದೂರು ನೀಡಿದ್ದಾರೆ.

ಮೊಬೈಲ್‌ಗೆ ಧನಂಜಯ ಅವರು ಬೆದರಿಕೆ ಕರೆ ಮಾಡಿದಲ್ಲದೆ ಇತರರಿಗೆ ಮೊಬೈಲ್ ನಂಬರ್ ಕೊಟ್ಟು ಬೆದರಿಕೆ ಒಡ್ಡುವಂತೆ ಪ್ರೇರೇಪಿಸಿದ್ದಾರೆ. ಅದರಿಂದಾಗಿ ಅನೇಕ ಕರೆಗಳು ಬರುತ್ತಿವೆ.

ಬೆದರಿಕೆ ಕರೆಯಿಂದಾಗಿ ಮುಂದೆ ಆಗಬಹುದಾದ ತೊಂದರೆಯನ್ನು ನಿವಾರಿಸಿ ಸೂಕ್ತ ರಕ್ಷಣೆ ನೀಡುವಂತೆ ಸುಭಾಷ್‌ ರೈ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

Category
ಕರಾವಳಿ ತರಂಗಿಣಿ