image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಹಿಳೆಗೆ ಚೂರಿ ತೋರಿಸಿ ಸುಲಿಗೆ ಪ್ರಕರಣ: ಆರೋಪಿ ಸೆರೆ

ಮಹಿಳೆಗೆ ಚೂರಿ ತೋರಿಸಿ ಸುಲಿಗೆ ಪ್ರಕರಣ: ಆರೋಪಿ ಸೆರೆ

ಮಂಗಳೂರು: ನಗರದ ನಾಗುರಿ ಮೆಡಿಕಲ್‌ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿಗೆ ಚೂರಿ ತೋರಿಸಿ, ಕೈಯಿಂದ ಹಲ್ಲೆ ಮಾಡಿ, ಶಾಪ್‌ನ ಕ್ಯಾಶ್ ಡ್ರಾವರ್ ನಲ್ಲಿದ್ದ ರೂ. 19,300 ನಗದು ಹಣ ದೋಚಿದ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೊಂದೇಲ್ ಪಟ್ರಕೋಡಿಯ ಸುನೀಲ್ (31) ಬಂಧಿತ ಆರೋಪಿಯಾಗಿದ್ದು,  ಫೆ. 28ರಂದು ಮಧ್ಯಾಹ್ನ ಸುಲಿಗೆ ಮಾಡಿಕೊಂಡು ಹೋಗಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು.

ಆರೋಪಿ ಸುನೀಲ್‌ನನ್ನು ದಸ್ತಗಿರಿ ಮಾಡಿ ದೋಚಿದ್ದ ರೂ. 17,500 ನಗದು ಹಣವನ್ನು ಹಾಗೂ ಸುಲಿಗೆ ಮಾಡಲು ಬಳಸಿದ ಸ್ಕೂಟರ್ ಹಾಗೂ ಇತರೆ ಸೊತ್ತುಗಳು ಸೇರಿದಂತೆ ಒಟ್ಟು ರೂ. 1,20,000 ಬೆಲೆ ಬಾಳುವ ಸೊತ್ತುಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.

ಮಂಗಳೂರು ದಕ್ಷಣ ವಿಭಾಗದ ಸಹಾಯಕ ಪೊಲೀಸ್‌ ಆಯುಕ್ತ ಧನ್ಯಾ ನಾಯಕ್ ಮಾರ್ಗದರ್ಶನದಲ್ಲಿ ಕಂಕನಾಡಿ ನಗರ ಠಾಣೆಯ ನಿರೀಕ್ಷಕ ಟಿ.ಡಿ ನಾಗರಾಜ್ ನೇತೃತ್ವದಲ್ಲಿ ಪಿ.ಎಸ್.ಐ ವಿನಾಯಕ ಭಾವಿಕಟ್ಟಿ ಹಾಗೂ ಶಿವಕುಮಾ‌ರ್ ಮತ್ತು ಸಿಬ್ಬಂದಿ ಜಯಾನಂದ, ಸಂದೀಪ್, ರಾಜೇಸಾಬ್, ಗಂಗಾಧರ್, ರಾಘವೇಂದ್ರ, ಪ್ರದೀಪ್ ಮತ್ತು ದಕ್ಷಣ ಉಪ ವಿಭಾಗ ಕಚೇರಿಯ ಸಿಬ್ಬಂದಿ ಆರೋಪಿ ಮತ್ತು ಸೊತ್ತು ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ