ಚಿಕ್ಕೋಡಿ: ಪತ್ನಿ ಸರಸಕ್ಕೆ ಬರದಿದ್ದಾಗ ಮಗಳ ಮೇಲೆ ಎರಗಲೆತ್ನಿಸಿದ ಪಾಪಿ ಪತಿಯನ್ನ, ಮಕ್ಕಳು ಮಲಗಿದ ಮೇಲೆ ಪತ್ನಿಯೇ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ಬೆಳಗಾವಿಯ ಜಿಲ್ಲೆಯ ಚಿಕ್ಕೋಡಿಯ ಉಮರಾಣಿ ಗ್ರಾಮದಲ್ಲಿ ನಡೆದಿದೆ. ಪತ್ನಿ ಸಾವಿತ್ರಿ ಇಟ್ನಾಳೆ (30)ಯಿಂದ ಗಂಡ ಶ್ರೀಮಂತ ಇಟ್ನಾಳೆ ಹತ್ಯೆಯಾಗಿದ್ದು, ಗಂಡನನ್ನು ಕೊಂದ ಬಳಿಕ ಮಕ್ಕಳು ಅನಾಥರಾಗ್ತಾರೆ ಅಂತಾ ಸಿನಿಮೀಯ ರೀತಿಯಲ್ಲಿ ತಾಯಿ ಪ್ಲಾನ್ ಮಾಡಿ ಮನೆಯಲ್ಲಿ ಶವ ಇದ್ದರೆ ಅರೆಸ್ಟ್ ಮಾಡ್ತಾರೆ ಅಂತ ಗಂಡನ ದೇಹವನ್ನೇ ತುಂಡರಿಸಿ ಎರಡು ಭಾಗ ಮಾಡಿ ಚಿಕ್ಕ ಬ್ಯಾರೆಲ್‌ನಲ್ಲಿ ಹಾಕಿ ಸಾಗಾಟ ಮಾಡಿದ್ದಾಳೆ. ಬ್ಯಾರೆಲ್ ಉರುಳಿಸುತ್ತಾ ಹೋಗಿ ಶವವನ್ನು ಪಕ್ಕದ ಗದ್ದೆಗೆ ಹಾಕಿ, ಕಟ್ ಮಾಡಿದ್ದ ದೇಹವನ್ನ ಮತ್ತೆ ಜೋಡಿಸಿದ ರೀತಿಯಲ್ಲಿ ಹಾಕಿದ್ದು, ಕೃತ್ಯಕ್ಕೆ ಬಳಸಿದ್ದ ಬ್ಯಾರೆಲ್ ತೊಳೆದು ಬಾವಿಗೆ ಎಸೆದು, ಮತ್ತೆ ಮನೆಗೆ ಬಂದು ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರ, ರಕ್ತಸಿಕ್ತವಾದ ಹಾಸಿಗೆ, ಬಟ್ಟೆ ಒಂದು ಚೀಲದಲ್ಲಿ ಪ್ಯಾಕ್ ಮಾಡಿ ಆ ಚೀಲವನ್ನು ಮೇಲೆ ಬರದಂತೆ ಕಲ್ಲು ಕಟ್ಟಿ ಎಸೆದು ವಾಪಸ್ ಬಂದಿದ್ದಳು. ರಕ್ತ ಬಿದ್ದ ಜಾಗವನ್ನು ಸ್ವಚ್ಛಗೊಳಿಸಿ ಸ್ನಾನ ಮಾಡಿ ಬಳಿಕ ತನ್ನ ಮೈಮೇಲಿದ್ದ ಬಟ್ಟೆ ಸುಟ್ಟು ಹಾಕಿ ಸುಟ್ಟಿದ್ದ ಬೂದಿಯನ್ನ ತಿಪ್ಪೆಗೆ ಎಸೆದಿದ್ದಳು. ಕೊಲೆಗೆ ಬಳಸಿದ್ದ ಕಲ್ಲು ತೊಳೆದು ತಗಡಿನ ಶೆಡ್‌ನಲ್ಲಿ ಬಚ್ಚಿಟ್ಟಿದ್ದಳು. ಗಂಡನ ಮೊಬೈಲ್ ಕೂಡ ಸ್ವಿಚ್ ಆಫ್ ಮಾಡಿ ಮನೆಯಲ್ಲಿಟ್ಟಿದ್ದಳು. ಈ ವೇಳೆ ಎಚ್ಚರಗೊಂಡ ಮೊದಲ ಮಗಳಿಗೆ ಎಲ್ಲಿಯೂ ಹೇಳದಂತೆ ತಾಕೀತು ಮಾಡಿದ್ದಳು.
ಬೆಳಗಾಗುವಷ್ಟರಲ್ಲಿ ಕೊಲೆಯ ಸುಳಿವೇ ಸಿಗದಂತೆ ಮಾಡಿದ್ದಳು. ಜಮೀನಿನಲ್ಲಿ ಶವ ಸಿಗ್ತಿದ್ದಂತೆ ಕೊಲೆ ಕೇಸ್ ದಾಖಲಿಸಿಕೊಂಡು ಚಿಕ್ಕೋಡಿ ಪೊಲೀಸರು ತನಿಖೆ ನಡೆಸಿದರು. ಈ ವೇಳೆ ಹೆಂಡತಿ ಮೇಲೆ ಅನುಮಾನ ಬಂದು ತಮ್ಮದೇ ಭಾಷೆಯಲ್ಲಿ ವಿಚಾರಿಸಿದಾಗ, ತನ್ನಿಂದ ತಪ್ಪಾಗಿದೆ ಕ್ಷಮಿಸಿ ಅಂತಾ ಕಣ್ಣೀರು ಹಾಕಿದ್ದಾಳೆ.
ಕುಡಿಯಲು ಹಣ ಕೊಡಬೇಕು, ಬೈಕ್ ಕೊಡಿಸುವಂತೆ ಕಿರುಕುಳ ನೀಡುತ್ತಿದ್ದ ಯಾರ ಜೊತೆಗೆ ಆದ್ರೂ ಮಲಗು ಹಣ ಕೊಡು ಅಂತಾ ಪೀಡಿಸುತ್ತಿದ್ದ ಗಂಡನಿಂದ ಬೇಸತ್ತು ಕೊಲೆ ಮಾಡಿರುವುದಾಗಿ ಪತ್ನಿ ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾಳೆ.