ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳದಿಂದ ಮತ್ತೋರ್ವ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ.ವಿದೇಶದಿಂದ ಹಿಂದಿರುಗುತ್ತಿದ್ದ ಸಂದರ್ಭ ಇಂದು ಎನ್‌ಐಎ ಅಧಿಕಾರಿಗಳು ಎ6 ಆರೋಪಿ ಮೊಹಮ್ಮದ್ ಷರೀಫ್ ಎಂಬಾತನನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.ಪ್ರವೀಣ್ ನೆಟ್ಟಾರು ಕೊಲೆಗೆ ಸಂಚು ರೂಪಿಸಿದ್ದ ತಂಡದಲ್ಲಿ ಬಂಧಿತ ಷರೀಫ್ ಗುರುತಿಸಿಕೊಂಡಿದ್ದನು. ಕೊಲೆ ನಂತರ ವಿದೇಶಕ್ಕೆ ಪರಾರಿಯಾಗಿ ತಲೆ ಮರೆಸಿಕೊಂಡಿದ್ದನು. ಈತನ ಪತ್ತೆಗೆ ಎನ್‌ಐಎಯಿಂದ 5 ಲಕ್ಷ ಬಹುಮಾನ ಕೂಡ ಘೋಷಿಸಲಾಗಿತ್ತು. ಇಂದು ಈತನನ್ನು ಬಂಧಿಸುವಲ್ಲಿ ಎನ್ ಐ ಎ ಯಶಸ್ವಿಯಾಗಿದ್ದಾರೆ.