image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

RSS ಹಾಗೂ ಹಿಂದೂ ಸಂಘಟನೆಗಳ ನಾಯಕರನ್ನು ಟಾರ್ಗೆಟ್ ಮಾಡಿದ್ದ ಬಾಂಗ್ಲಾದ ಓರ್ವ ಸೇರಿ 8 ಉಗ್ರರ ಬಂಧನ

RSS ಹಾಗೂ ಹಿಂದೂ ಸಂಘಟನೆಗಳ ನಾಯಕರನ್ನು ಟಾರ್ಗೆಟ್ ಮಾಡಿದ್ದ ಬಾಂಗ್ಲಾದ ಓರ್ವ ಸೇರಿ 8 ಉಗ್ರರ ಬಂಧನ

ನವದೆಹಲಿ: ಆರ್‌ಎಸ್‌ಎಸ್ ಮತ್ತು ಹಿಂದೂ ಸಂಘಟನೆಗಳ ಸದಸ್ಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಬಾಂಗ್ಲಾದೇಶದ ಓರ್ವ ಉಗ್ರ ಸೇರಿದಂತೆ 8 ಭಯೋತ್ಪಾದಕರನ್ನು ಅಸ್ಸಾಂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೇರಳದಿಂದ ಅಸ್ಸಾಂ ಪೊಲೀಸರ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಬಂಧಿಸಿದ ಎಂಟು ಭಯೋತ್ಪಾದಕರಲ್ಲಿ ಅಲ್-ಖೈದಾ ಅಂಗಸಂಸ್ಥೆಯ ಸದಸ್ಯನಾಗಿರುವ ಬಾಂಗ್ಲಾದೇಶದ ಭಯೋತ್ಪಾದಕನೂ ಸೇರಿದ್ದಾನೆ. ಬಾಂಗ್ಲಾದೇಶದ ಸದ್ ರಾಡಿ ಅಕಾ ಶಾಬ್ ಸೇಖ್ (32) ಕೇರಳಕ್ಕೆ ತೆರಳುವ ಮೊದಲು ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಸ್ವೀಪರ್ ಸೆಲ್‌ಗಳನ್ನು ಸಕ್ರಿಯಗೊಳಿಸಲು ನವೆಂಬರ್‌ನಲ್ಲಿ ಭಾರತಕ್ಕೆ ಬಂದಿದ್ದ ಎಂದು ಎಸ್‌ಟಿಎಫ್ ಹೇಳಿಕೆಯಲ್ಲಿ ತಿಳಿಸಿದೆ. ಎಸ್‌ಟಿಎಫ್ ಅವರು ಕೇರಳ ಮತ್ತು ಬಂಗಾಳದಲ್ಲಿ ಪೊಲೀಸರೊಂದಿಗೆ ಕೆಲಸ ಮಾಡಿದ್ದಾರೆ. ಅಲ್ ಖೈದಾ- ಅಂಗಸಂಸ್ಥೆಯ ಸಹಾಯಕ ಫರ್ಹಾನ್ ಇಸ್ರಾಕ್ ಅಡಿಯಲ್ಲಿ ಭಯೋತ್ಪಾದಕರ ಗುಂಪು ಕೆಲಸ ಮಾಡುತ್ತಿದೆ ಎಂಬ ಗುಪ್ತಚರ ವರದಿಗಳನ್ನು ಆಧರಿಸಿ ಭಾರತದಾದ್ಯಂತ 'ಆಪರೇಷನ್‌ ಪ್ರಘಾತ್' ನಡೆಸಿದ್ದರು. ಆರ್‌ಎಸ್‌ಎಸ್ ಮತ್ತು ಇತರ ಹಿಂದೂಗಳನ್ನು ಗುರಿಯಾಗಿಸಲು ಭಾರತದಲ್ಲಿ ಸ್ವೀಪರ್ ಸೆಲ್‌ಗಳನ್ನು ಸಕ್ರಿಯಗೊಳಿಸಲು ಬಾಂಗ್ಲಾದೇಶದ ನಾಯಕ ಪ್ರಯತ್ನಿಸಿರುವ ಬಗ್ಗೆ ಗುಪ್ತಚರ ಮಾಹಿತಿ,  ಕೇಂದ್ರೀಯ ಏಜೆನ್ಸಿಗಳು, ಪಶ್ಚಿಮ ಬಂಗಾಳ ಮತ್ತು ಕೇರಳ ಪೊಲೀಸರ ಸಹಾಯದಿಂದ ನಾವಿದನ್ನು ಚಿಗುರುವುದಕ್ಕೂ ಮುಂಚೆಯೇ ಚಿವುಟಿ ಹಾಕಬೇಕು. ಈ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸಿದ್ದೇವೆಂದು ಅಸ್ಸಾಂನ ವಿಶೇಷ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಹರ್ಮೀತ್ ಸಿಂಗ್ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ