image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರಿನಲ್ಲಿ ಹೊಸ ವರ್ಷದ ಆಚರಣೆಗೆಂದು ತರಿಸಿದ್ದ ಮಾದಕ ದ್ರವ್ಯ ಪತ್ತೆ: ಮೂವರ ಬಂಧನ

ಮಂಗಳೂರಿನಲ್ಲಿ ಹೊಸ ವರ್ಷದ ಆಚರಣೆಗೆಂದು ತರಿಸಿದ್ದ ಮಾದಕ ದ್ರವ್ಯ ಪತ್ತೆ: ಮೂವರ ಬಂಧನ

ಮಂಗಳೂರು: ಕೂಳೂರು ನದಿ ದಂಡೆಯಲ್ಲಿ ಮಾರಾಟಕ್ಕೆಂದು ತಂದಿದ್ದ ಸುಮಾರು  9 ಲಕ್ಷ ರೂಪಾಯಿ ಮೌಲ್ಯದ 5 ಕೆ.ಜಿ ಗಾಂಜಾ, 100 ಗ್ರಾಂ ಎಮ್ ಡಿ ಎಮ್ ಎ, 7 ಗ್ರಾಂ ಕೋಕೆನ್, 17 ಗ್ರಾಂ ತೂಕದ 35 ಎಮ್ ಡಿ ಎಮ್ ಎ ಪಿಲ್ಸ್, 100 ಗ್ರಾಂ ಚರಸ್,೦8 ಗ್ರಾಮ್ ಹೈಡೋವಿಡ್ ಗಾಂಜಾ, 3 ಎಲ್.ಎಸ್.ಡಿ ಸ್ಕ್ರಿಪ್ ಗಳನ್ನು ಮಂಗಳೂರು ಪೊಲೀಸರು ವಶಪಡಿಸಿಕೊಂಡು, ಮೂವರು  ಅರೋಪಿಗಳನ್ನು ಬಂಧಿಸಿದ್ದಾರೆ.

ಇದರಿಂದ ಒಂದು ಹರಿತವಾದ ಚಾಕು, ತೂಕ ಮಾಪನಗಳು, ಪ್ಲಾಸ್ಟಿಕ್ ಕವರ್ ಗಳನ್ನು ಹಾಗೂ ಇದನ್ನು ಸಾಗಾಟ ಮಾಡಲು ಉಪಯೋಗಿಸಿದ ಹುಂಡೈ ಐ 10 ಕಾರ್ ನಂಬ್ರ ಕೆ.ಎ 19 ಎಮ್ ಎಫ್ 8591 ಮತ್ತು ಏಕ್ಸೆಸ್ 125 ನಂಬರ್ ಇಲ್ಲದ ಸ್ಕೂಟರ್ ಇವುಗಳನ್ನು  ಡ್ರಗ್ಸ್ ಸ್ಟಾಡ್ ಹಾಗೂ ಕಾವೂರು ಪೊಲೀಸರು ವಶಪಡಿಸಿಕೊಂಡು ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. 

1) ದೇವರಾಜ್ (37) ತಂದೆ: ಅಚ್ಚುತ್ ವಾಸ: 5-74 ಸಂಪಿಗೆ ನಗರ ಉದ್ಯಾವರ ಪೊಪ್ಪ ಉಡುಪಿ.

2) ಮೊಹಮ್ಮದ್ ಫರ್ವೆಜ್ ಉಮರ್ (25) ತಂದೆ: ದಿ. ಉಮ್ಮರ್ ಸಾಹೇಬ್ ವಾಸ: ಬಾಂಡವರ್ ಪ್ಯಾರಡೈಸ್ ಬಿಲ್ಡಿಂಗ್ 1 ನೇ ಮಹಡಿ ಕಿನ್ನಿ ಮುಲ್ಕಿ ಹತ್ತಿರ ರಾಮಚಂದ್ರ ಲೈನ್ ಉಡುಪಿ 

3) ಶೇಖ್ ತಹೀಮ್ (20) ತಂದೆ: ಟಿ ಅಬ್ದುಲ್ ಅಜೀಸ್ ವಾಸ: ಬ್ಲೂಮೂನ್ ಅಪಾರ್ಟ ಮೆಂಟ್ ಗೌಂಡ್ ಪ್ಲೋರ್ ಪ್ಲಾಟ್ ನಂಬ್ರ 001 ಬೃಹ್ಮಗಿರಿ ಉಡುಪಿ. ಇವರುಗಳು ಆರೋಪಿಗಳಾಗಿದ್ದು, ಈ ಆರೋಪಿಗಳಲ್ಲಿ ಪರ್ವೇಜ್ ಎಂಬಾತನು ಮೇಲೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 03 ಗಾಂಜಾ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ. ಈ ಪ್ರಕರಣದಲ್ಲಿ ಇನ್ನು ಹೆಚ್ಚಿನ ಆರೋಪಿತರುಗಳನ್ನು ಪತ್ತೆ ಹಚ್ಚಲು ಬಾಕಿ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ