ಮಂಗಳೂರು : ವ್ಯಕ್ತಿಯೊಬ್ಬರು ಎಂಸಿಸಿ ಬ್ಯಾಂಕ್ ಅಧ್ಯಕ್ಷರ ಕಿರುಕುಳದ ಬಗ್ಗೆ ಹೇಳಿಕೊಂಡು ಸಾವಿಗೆ ಶರಣಾದ ಘಟನೆ ಉಳಾಯಿಬೆಟ್ಟು ಬಳಿಯ ಫೆರ್ಮಾಯಿ ಎಂಬಲ್ಲಿ ನಡೆದಿದೆ.ಮನೋಹರ್ ಪಿರೇರಾ (46) ಮೃತರು. ಪ್ಯಾರಾಲಿಸಿಸ್ ಆಗಿ ಕಾಲು ಊನಗೊಂಡಿದ್ದ ಮನೋಹರ್ ಅವರು ಕೋವಿಡ್ ಬಳಿಕ ತೀವ್ರ ನಷ್ಟಕ್ಕೀಡಾಗಿದ್ದರು ಎನ್ನಲಾಗಿದೆ. ಅಲ್ಲದೆ, ಮನೆಯ ಕಾರಣಕ್ಕೆ ಎಂಸಿಸಿ ಬ್ಯಾಂಕಿನಲ್ಲಿ ಸಾಲ ಮಾಡಿದ್ದರು. ಅದನ್ನು ಕಟ್ಟಲಾಗದೆ ಜಪ್ತಿ ಆಗುವಷ್ಟರ ಮಟ್ಟಿಗೆ ಬಂದಿತ್ತು. ಇದೀಗ ವಿಡಿಯೋ ಮಾಡಿ ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ತನಗೆ ಭಾರೀ ಕಿರುಕುಳ ನೀಡಿದ್ದಾನೆಂದು ಹೇಳಿ ಸಾವಿಗೆ ಶರಣಾಗಿದ್ದಾರೆ. ವಿಡಿಯೋ ವೈರಲ್ ಆಗುತ್ತಿದೆ. ಕಂಕನಾಡಿ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.