ಮಂಗಳೂರು: ಗಾಂಜಾ ಸೇವಿಸಿದ ಮೂವರನ್ನು ನಗರದ ವಿವಿಧೆಡೆಯಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪಾಂಡೇಶ್ವರ ಕಟ್ಟೆ ಬಳಿ ಸಾರ್ವ ಜನಿಕರಿಗೆ ತೊಂದರೆ ನೀಡುತ್ತಿದ್ದ ಎರ್ನಾಕುಳಂ ಜಿಲ್ಲೆಯ ಶ್ರೀಹರಿ (24)ಯನ್ನು ಪಾಂಡೇಶ್ವರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನೀರುಮಾರ್ಗದ ಕೆಲ್ಸಾಯ್ ಬಸ್ ನಿಲ್ದಾಣದ ಬಳಿ ತಿರುವನಂತಪುರ ಜಿಲ್ಲೆಯ ಮೊಹಮ್ಮದ್ ಯೂಸುಫ್ (21)ನನ್ನು ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು ಮತ್ತು ಕೆಂಜಾರು ಗ್ರಾಮದ 313 ಜಂಕ್ಷನ್ ಬಳಿ ಅಮಲಿನಲ್ಲಿದ್ದ ತೋಕೂರು ನಿವಾಸಿ ಉಮ್ಮರ್ ಫಾರೂಕ್ (40)ನನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ