ತುಮಕೂರು : ಸೋಡಿಯಂ ಮೆಟಲ್ ಬಳಸಿ ಕೃಷಿ ಹೊಂಡದಲ್ಲಿ ನಡೆಸಿದ್ದ ಸ್ಫೋಟ ಪ್ರಕರಣದ ಆರೋಪದಡಿ ಇದೀಗ ಬಿಗ್‌ಬಾಸ್ ಖ್ಯಾತಿಯ ಮಾಜಿ ಸ್ಪರ್ಧಿ ಡೋನ್ ಪ್ರತಾಪ್ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನಿರ್ಜನ ಪ್ರದರ್ಶನದ ಕೃಷಿ ಹೊಂಡವೊಂದರಲ್ಲಿ ಪ್ರತಾಪ್ ಸೋಡಿಯಂ ಮೆಟಲ್ ಬಳಸಿಕೊಂಡು, ಅದು ನೀರಿಗೆ ಬೆರೆತಾಗ ಹೇಗೆ ಸ್ಫೋಟವಾಗುತ್ತೆ ನೋಡಿ ಎಂಬ ಎಕ್ಸಪೆರಿಮೆಂಟ್ ಮಾಡಿರುವ ಸೈನ್ಸ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಇದರ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದು, ಘಟನೆ ಸಂಬಂಧ ಮಿಡಿಗೇಶಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈಹಿನ್ನೆಲೆಯಲ್ಲಿ ಮಿಡಿಗೇಶಿ ಪೊಲೀಸರು ಡೋನ್ ಪ್ರತಾಪ್ ರನ್ನು ಬಂಧಿಸಿದ್ದಾರೆ. ನೀರಿಗೆ ಸೋಡಿಯಂ ಮೆಟಲ್ ಹಾಕುತ್ತಿದ್ದಂತೆ ಅದು ತಕ್ಷಣ ದೊಡ್ಡ ಮಟ್ಟದಲ್ಲಿ ಸ್ಫೋಟವಾಗಿದ್ದಲ್ಲದೇ, ಶಬ್ದ ಕೂಡ ದೊಡ್ಡ ಪ್ರಮಾಣದಲ್ಲೇ ಕೇಳಿಸಿತ್ತು. ಇದರ ಲೈವ್ ವಿಡಿಯೋವನ್ನು ಪ್ರತಾಪ್ ಹಂಚಿಕೊಂಡಿದ್ದ. ಪ್ರತಾಪ್ ಇದೇನು ಕಿತಾಪತಿಗೆ ಅಂತಾ ಕೆಲ ಪರಿಸರ ಪ್ರೇಮಿಗಳು ವಿರೋಧ ವ್ಯಕ್ತಪಡಿಸಿದ್ದಾರೆ