image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಡೆಂಝ್, ಪೋರ್ಟರ್ ಆ್ಯಪ್ ಗಳ ಮೂಲಕ ಡ್ರಗ್ಸ್‌ ಪೂರೈಕೆ :ಟೆಕ್ಕಿ ಸೇರಿ ಇಬ್ಬರ ಬಂಧನ

ಡೆಂಝ್, ಪೋರ್ಟರ್ ಆ್ಯಪ್ ಗಳ ಮೂಲಕ ಡ್ರಗ್ಸ್‌ ಪೂರೈಕೆ :ಟೆಕ್ಕಿ ಸೇರಿ ಇಬ್ಬರ ಬಂಧನ

ಬೆಂಗಳೂರು: ಹಿಂದೆ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಡ್ರಗ್ಸ್ ಮಾರಾಟ ಜಾಲದಿಂದ ಬರುವ ಆದಾಯಕ್ಕೆ ಮನಸೋತು ಡ್ರಗ್ಸ್ ಮಾರಾಟಕ್ಕಿಳಿದಿರುವ ಘಟನೆ  ಬೆಂಗಳೂರಿನಲ್ಲಿ ವರದಿಯಾಗಿದೆ.  ಕುಮಾರಸ್ವಾಮಿ ಲೇಔಟ್ ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ಅಲ್ಲಿಂದಲೇ ಡ್ರಗ್ಸ್ ಸಪ್ಲೈ ಮಾಡುತ್ತಿದ್ದು, ಆತ ಹಾಗೂ ಆತನ ಸಹಚರರನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಉಪಯುಕ್ತ ಸಾಮಗ್ರಿಗಳನ್ನು ಮನೆ ಬಾಗಿಲಿಗೆ ತಲುಪಿಸುವ ಆ್ಯಪ್ ಡಂಝ್ ಹಾಗೂ ಸರಕು - ಗೃಹೋಪಯೋಗಿ ವಸ್ತುಗಳ ಸಾಗಾಣಿಕೆಯ ಪೋರ್ಟರ್ ಆ್ಯಪ್ ಸೇವೆಗಳ ಮೂಲಕ ಅವರು ಡ್ರಗ್ಸ್ ಗಳನ್ನು ಗ್ರಾಹಕರಿಗೆ ಕಳುಹಿಸುತ್ತಿದ್ದುದು ಬೆಳಕಿಗೆ ಬಂದಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಕಿಂಗ್‌ಪಿನ್‌ನ ಸೂಚನೆಯಂತೆ ನಗರದ ಕಾಲೇಜು ವಿದ್ಯಾರ್ಥಿಗಳು ಹಾಗೂ ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ಪೋರ್ಟರ್ ಮೂಲಕ ಡ್ರಗ್ಸ್ ಪೂರೈಸುತ್ತಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಸೇರಿ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ ಫಯೀಸ್ (28), ನಾಗರಬಾವಿಯ ಕೆ.ಗೌತಮ್ ಬಂಧಿತರು. ಆರೋಪಿಗಳು ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದ 71 ಲಕ್ಷ ರೂ. ಮೌಲ್ಯದ ಎಂಡಿಎಂಎ ಕ್ರಿಸ್ಟಲ್, ಹೈಡೋ ಗಾಂಜಾ, ಎಲ್‌ಎಸ್‌ಡಿ ಸ್ವಿಫ್ಟ್ ಹಾಗೂ ಹಾಶಿಶ್ ಆಯಿಲ್ ಅನ್ನು ಜಪ್ತಿ ಮಾಡಲಾಗಿದೆ. ಸಾಫ್ಟ್‌ವೇ‌ರ್ ಕಂಪನಿಯೊಂದರಲ್ಲಿಕೆಲಸ ಮಾಡುತ್ತಿದ್ದ ಗೌತಮ್, ಡ್ರಗ್ಸ್‌ ದಂಧೆಗಿಳಿದ ಬಳಿಕ ಉದ್ಯೋಗ ತೊರೆದಿದ್ದ. ಕಳೆದ ಒಂದೂವರೆ ವರ್ಷದಿಂದ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಈತನನ್ನು ಜನವರಿಯಲ್ಲಿ ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಜಾಮೀನಿನ ಮೇಲೆ ಹೊರಬಂದ ಬಳಿಕ ಫಯೀಸ್ ಜತೆ ಸೇರಿ ದಂಧೆ ಮುಂದುವರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ

Category
ಕರಾವಳಿ ತರಂಗಿಣಿ