image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪ್ಲಿಪ್ ಕಾರ್ಟ್ ಖಾತೆ ಹ್ಯಾಕ್ ಮಾಡಿ ವಂಚನೆ: ಆರೋಪಿ ದೆಹಲಿ ಮೂಲದ ಗೌರವ್ ಮಕ್ವಾನ್‌ ಸೆರೆ

ಪ್ಲಿಪ್ ಕಾರ್ಟ್ ಖಾತೆ ಹ್ಯಾಕ್ ಮಾಡಿ ವಂಚನೆ: ಆರೋಪಿ ದೆಹಲಿ ಮೂಲದ ಗೌರವ್ ಮಕ್ವಾನ್‌ ಸೆರೆ

ಮಂಗಳೂರು: ಸೈಬರ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ ಸೈಬರ್ ಇಕೋನಾಮಿಕ್ ನಾರ್ಕೋಟಿಕ್ ಕ್ರೈಂ (ಸೆನ್) ಪೊಲೀಸರು ದೆಹಲಿ ಮೂಲದ ಗೌರವ್ ಮಕ್ವಾನ್ (25) ಎಂಬಾತನನ್ನು ಬಂಧಿಸಿದ್ದಾರೆ.

ಯದುನಂದನ್ ಎಂಬವರ ವಾಟ್ಸ್‌ಆ್ಯಪ್‌ಗೆ ಬಂದ ಸಂದೇಶದಂತೆ ಅವರು ಆ್ಯಪ್ ಡೌನ್‌ಲೋಡ್ ಮಾಡುತ್ತಿದ್ದಂತೆ ಪ್ಲಿಪ್‌ಕಾರ್ಟ್ ಖಾತೆ ಹ್ಯಾಕ್ ಆಗಿದೆ. ಸೈಬ‌ರ್ ವಂಚಕರು  ಪ್ಲಿಪ್‌ಕಾರ್ಟ್ ಖಾತೆಯನ್ನು ಬಳಸಿಕೊಂಡು 1,31,000 ರೂ.ಮೌಲ್ಯದ ಎರಡು ಮೊಬೈಲ್ ಫೋನ್ ಹಾಗೂ ಗಿಫ್ಟ್ ವೋಚರ್‌ಗಳನ್ನು ಖರೀದಿಸಿದ್ದರು. ಈ ಬಗ್ಗೆ ಯದುನಂದನ್ ಸೆನ್ ಠಾಣೆಗೆ ದೂರು ನೀಡಿದ್ದಾರೆ.

ಈ  ಪ್ರಕರಣದ ಬೆನ್ನುಹತ್ತಿದ ಎಎಸ್ಸೆ ಗುರಪ್ಪಕಾಂತಿ, ಪೊಲೀಸ್ ಕಾನ್‌ಸ್ಟೇಬಲ್ ತಿಪ್ಪಾರೆಡ್ಡಿ ದೆಹಲಿಯ ಗೌರವ್ ಮಕ್ವಾನ್ ನನ್ನು ಬಂಧಿಸಿದ್ದಾರೆ. ಅಲ್ಲದೆ ಆರೋಪಿಯಿಂದ ಅಂಡ್ರಾಯ್ಡ್ ಪೋನ್, ಐಪೋನ್, ಏರ್‌ಪ್ಯಾಡ್, ಆರೋಪಿಯು ಕೃತ್ಯಕ್ಕೆ ಬಳಸಿದ ಮೊಬೈಲ್‌ ಫೋನ್‌ ಸಹಿತ 4 ಲಕ್ಷ ರೂ. ಮೌಲ್ಯದ NEW ಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ