image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅನಿವಾಸಿ ಉದ್ಯಮಿಯ ಕೊಲೆ ಪ್ರಕರಣದಲ್ಲಿ ಮೂವರು ಮಹಿಳೆಯರು ಸೇರಿ ನಾಲ್ವರ ಬಂಧನ

ಅನಿವಾಸಿ ಉದ್ಯಮಿಯ ಕೊಲೆ ಪ್ರಕರಣದಲ್ಲಿ ಮೂವರು ಮಹಿಳೆಯರು ಸೇರಿ ನಾಲ್ವರ ಬಂಧನ

ಕಾಸರಗೋಡು : ಒಂದೂವರೆ ವರ್ಷಗಳ ಹಿಂದೆ ಬೇಕಲ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅನಿವಾಸಿ ಉದ್ಯಮಿಯ ಸಾವಿನ ಪ್ರಕರಣ ಕೊಲೆ ಎಂದು ಸಾಬೀತಾಗಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಮಹಿಳೆಯರು ಸೇರಿದಂತೆ ನಾಲ್ವರನ್ನು ವಿಶೇಷ ತನಿಖಾ ತಂಡ ಬಂಧಿಸಿದೆ. ಮೇಲ್ಪರಂಬ ಕುಳಿಕುನ್ನುವಿನ ಶಮೀಮಾ (38), ಆಕೆಯ ಪತಿ ಉಬೈದ್ (40), ಪೂಚಕ್ಕಾಡ್ ನ ಅನ್ಸಿಫಾ (34) ಮತ್ತು ಮಧೂರಿನ ಆಯಿಷಾ (40) ಬಂಧಿತರು ಎಂದು ಗುರುತಿಸಲಾಗಿದೆ.

ಚಿನ್ನಾಭರಣವನ್ನು ದ್ವಿಗುಣಗೊಳಿಸುವುದಾಗಿ ನಂಬಿಸಿ ವಾಮಾಚಾರದ ಹೆಸರಲ್ಲಿ ಸುಮಾರು 596 ಪವನ್ ಚಿನ್ನಾಭರವನ್ನು ಇವರು ಲಪಾಟಿಯಿಸಿದ್ದರು ಎನ್ನಲಾಗಿದ್ದು, ಬಳಿಕ ಚಿನ್ನಾಭರಣವನ್ನು ಗಫೂರ್ ಹಾಜಿ ಮರಳಿಸುವಂತೆ ಕೇಳಿದ್ದು, ಈ ಕಾರಣಕ್ಕಾಗಿ ಕೊಲೆ ನಡೆಸಿರುವುದಾಗಿ ತನಿಖಾ ತಂಡ ತಿಳಿಸಿದೆ.

2023 ರ ಏಪ್ರಿಲ್ 14 ರಂದು ಕೊಲೆ ನಡೆದಿತ್ತು. ಕೃತ್ಯ ನಡೆದ ದಿನ ಗಫೂ‌ರ್ ಹಾಜಿ ಮಾತ್ರ ಮನೆಯಲ್ಲಿದ್ದರು. ಪತ್ನಿ ಮತ್ತು ಮಕ್ಕಳು ಸಂಬಂಧಿಕರ ಮನೆಗೆ ತೆರಳಿದ್ದರು. ಮರಳಿ ಬಂದಾಗ ಗಫೂರ್ ಮನೆಯ ಕೊನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸಹಜ ಸಾವು ಎಂದು ಪತ್ನಿ, ಮಕ್ಕಳು, ಸಂಬಂಧಿಕರು ನಂಬಿದ್ದರು. ಇದರಿಂದ ಮೃತದೇಹವನ್ನು ದಫನ ಮಾಡಲಾಗಿತ್ತು. ದಿನಗಳ ಬಳಿಕ ಗಮನಿಸಿದಾಗ ಮನೆಯಿಂದ 596 ಪವನ್ ಚಿನ್ನಾಭರಣ ನಾಪತ್ತೆಯಾಗಿರುವುದು ಮನೆಯವರ ಗಮನಕ್ಕೆ ಬಂದಿದೆ. ಈ ಬಗ್ಗೆ ಅಬ್ದುಲ್ ಗಫೂರ್ ರ ಪುತ್ರ ಅಹ್ಮದ್ ಮುಸಮ್ಮಿಲ್ ಬೇಕಲ ಠಾಣಾ ಪೊಲೀಸರಿಗೆ ಹಾಗೂ ಮುಖ್ಯಮಂತ್ರಿಗೆ ದೂರು ನೀಡಿದ್ದರು.

Category
ಕರಾವಳಿ ತರಂಗಿಣಿ