ಬೆಳ್ತಂಗಡಿ: ಕಳೆದ ಮೂರು ತಿಂಗಳ ಹಿಂದೆ ವಿವಾಹವಾಗಿದ್ದ ಮಲವಂತಿಗೆ ಗ್ರಾಮದ ವಿವಾಹಿತ ಯುವಕ ಮಂಗಳೂರಿನ ರೂಮಿನಲ್ಲಿ ನೇಣುಬಿಗಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಡಿ.4ರಂದು ನಡೆದಿದೆ.
ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಪರಾರಿ ನಿವಾಸಿ ಕೃಷ್ಣಪ್ಪ ಪೂಜಾರಿಯವರ ಮೂರನೆಯ ಪುತ್ರ ಪ್ರದೀಪ್(32) ಮಂಗಳೂರಿನಲ್ಲಿ ಹೊಟೇಲ್ ನಲ್ಲಿ ಉದ್ಯೋಗ ಮಾಡಿಕೊಂಡಿದ್ದರು ಪ್ರದೀಪ್ ಕಳೆದ ಮೂರು ತಿಂಗಳ ಹಿಂದೆ ಪ್ರೀತಿಸಿದ ಯುವತಿ ಜತೆ ಸ್ಥಳೀಯ ದೇವಸ್ಥಾನದಲ್ಲಿ ಮದುವೆಯಾಗಿದ್ದರು.
ದಂಪತಿ ಮಂಗಳೂರಿನಲ್ಲಿ ವಾಸವಾಗಿದ್ದು, ಡಿ.3 ರಂದು ಮಲವಂತಿಗೆಯ ಮನೆಗೆ ಬಂದು ಹೋಗಿದ್ದರು. ಡಿ.4 ರಂದು ಸಂಜೆ ಮಂಗಳೂರು ರೂಮಿನಲ್ಲಿ ನೇಣುಬಿಗಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.