image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಆರೋಪಿ ಅಬೂಬಕ್ಕರ್ ಸಿದ್ದಿಕ್ ಹೆಂಡತಿ ಮನೆಗೆ ಸರ್ಚ್ ವಾರೆಂಟ್ ನೊಂದಿಗೆ ಆಗಮಿಸಿದ ಎನ್ ಐ ಎ

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಆರೋಪಿ ಅಬೂಬಕ್ಕರ್ ಸಿದ್ದಿಕ್ ಹೆಂಡತಿ ಮನೆಗೆ ಸರ್ಚ್ ವಾರೆಂಟ್ ನೊಂದಿಗೆ ಆಗಮಿಸಿದ ಎನ್ ಐ ಎ

ಪುತ್ತೂರು: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಆರೋಪಿಗಳಿಗೆ ಸಹಕಾರ ನೀಡಿದ ಅಬೂಬಕ್ಕರ್ ಸಿದ್ದಿಕ್ ಎಂಬಾತ ತಲೆ ಮರೆಸಿಕೊಂಡಿದ್ದಾನೆ. ಇದೀಗ ಸರ್ಚ್ ವಾರೆಂಟ್ ನೊಂದಿಗೆ ಆತನ ಹೆಂಡತಿಯ ಮನೆಗೆ ಎನ್ ಐ ಎ ಪೊಲೀಸರು ಇಂದು ಬೆಳಿಗ್ಗೆ ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ದೊರೆತಿದೆ.

ಕೆಯ್ಯೂರಿನಲ್ಲಿರುವ ಅಬೂಬಕ್ಕರ್ ಸಿದ್ದಿಕ್ ನ ಹೆಂಡತಿ ಮನೆಗೆ ಎನ್ ಐ ಎ ಪೊಲೀಸರು ಇದೀಗ ದಾಳಿ ನಡೆಸಿದ್ದಾರೆ. ಅಬೂಬಕ್ಕರ್ ಸಿದ್ದಿಕ್ ಪ್ರವೀಣ್ ನೆಟ್ಟಾರ್ ನನ್ನು ಕೊಲೆ ನಡೆದ ಸಮಯದಲ್ಲಿ ಸ್ಥಳದಲ್ಲೇ ಇದ್ದು ಆರೋಪಿಗಳಿಗೆ ಸಹಕರಿಸಿದ್ದ ಎಂಬ ಆರೋಪದಲ್ಲಿ ಎನ್ ಐ ಎ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ಮೂಲಗಳಿಂದ ತಿಳಿದಿದೆ.

Category
ಕರಾವಳಿ ತರಂಗಿಣಿ