ಬೆಂಗಳೂರು : ಸಚಿವ ಜಮೀರ್ ಪುತ್ರ ಝದ್ ಖಾನ್ ಅಭಿನಯದ "ಕಲ್ಟ್" ಚಿತ್ರದ ಡೋನ್ ಟೆಕ್ನಿಶಿಯನ್ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, 'ಕಲ್ಟ್" ಚಿತ್ರದ ಡೋನ್ ಟೆಕ್ನಿಶಿಯನ್ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ.
ಸಂತೋಷ್ ದಿನಕ್ಕೆ 25 ಸಾವಿರ ನಿಗದಿ ಮಾಡಿ ಡೋನ್ ಶೂಟ್ ಮಾಡುತ್ತಿದ್ದನು. ಆದರೆ ಚಿತ್ರದುರ್ಗದಲ್ಲಿ ಶೂಟಿಂಗ್ ಮಾಡುತ್ತಿದ್ದಾಗ ಡೋನ್ ಮಿಸ್ ಆಗಿ ವಿಂಡ್ ಫ್ಯಾನ್ ಗೆ ತಗುಲಿದೆ ಎನ್ನಲಾಗಿದೆ. ಇದರ ನಷ್ಟ ಭರಿಸುವಂತೆ ಕಲ್ಟ್ ಚಿತ್ರದ ಡೋನ್ ತಂತ್ರಜ್ಞ ಸಂತೋಷ್ ಚಿತ್ರತಂಡವನ್ನು ಕೇಳಿಕೊಂಡಿದ್ದಾನೆ. ಆದರೆ ಚಿತ್ರತಂಡ ಯಾವುದೇ ನಷ್ಟ ಭರಿಸದೇ ಮೆಮೊರಿ ಕಾರ್ಡ್ ಕಿತ್ತುಕೊಂಡಿದೆ ಎಂಬ ಆರೋಪ ಕೇಳಿಬಂದಿದ್ದು, ಇದರಿಂದ ಮನನೊಂದು ಸಂತೋಷ್ ಆತ್ಮಹತ್ಯೆಗೆ ಯತ್ನಿಸಿರುವ ಆರೋಪ ಕೇಳಿಬಂದಿದೆ. ಅದೃಷ್ಟವಶಾತ್ ಸಂತೋಷ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದ್ದು, ಈ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಎನ್ ಸಿ ಆರ್ ದಾಖಲಾಗಿದೆ