image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ

ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ

ರಾಂಚಿ: ಜಾರ್ಖಂಡ್‌ನ ಖುಂಟಿ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಮಾಂಸದಂಗಡಿಯಲ್ಲಿ ಕೆಲಸ ಮಾಡುತ್ತಿದ್ದ 25 ವರ್ಷದ ಯುವಕನೊಬ್ಬ ತನ್ನ ಪ್ರೇಯಸಿಯನ್ನು ಅರಣ್ಯ ಪ್ರದೇಶದಲ್ಲಿ ಕತ್ತು ಹಿಸುಕಿ ಕೊಂದು ಆಕೆಯ ದೇಹವನ್ನು 40 ರಿಂದ 50 ತುಂಡುಗಳಾಗಿ ಕತ್ತರಿಸಿದ್ದಾನೆ ಘಟನೆ  ವರದಿಯಾಗಿದೆ.

ಆರೋಪಿಯನ್ನು ನರೇಶ್ ಭೇಂಗ್ರಾ ಎಂದು ಗುರುತಿಸಲಾಗಿದ್ದು, ನವೆಂಬರ್ 24 ರಂದು ಜರಿಯಾಗಢ ಪೊಲೀಸ್ ಠಾಣೆಯ ಜೋರ್ದಾಗ್ ಗ್ರಾಮದ ಬಳಿ ಬೀದಿ ನಾಯಿಯೊಂದು ಮಾನವ ದೇಹದ ಭಾಗಗಳೊಂದಿಗೆ ಪತ್ತೆಯಾದಾಗ ಹತ್ಯೆಯಾದ ಹದಿನೈದು ದಿನಗಳ ನಂತರ ವಿಷಯ ಬೆಳಕಿಗೆ ಬಂದಿದೆ.

ಕಳೆದೆರಡು ವರ್ಷಗಳಿಂದ ತಮಿಳುನಾಡಿನ  24ರ ಹರೆಯದ ಯುವತಿಯೊಂದಿಗೆ ಭೇಂಗ್ರಾ ಲಿವ್-ಇನ್ ಸಂಬಂಧದಲ್ಲಿದ್ದ. ಸ್ವಲ್ಪ ಸಮಯದ ಹಿಂದೆ, ಜಾರ್ಖಂಡ್‌ಗೆ ಮರಳಿದ್ದ ಭೇಂಗ್ರಾ ಪ್ರೇಯಸಿಗೆ ವಿಚಾರ ತಿಳಿಸದೆ, ಇನ್ನೊಬ್ಬ ಮಹಿಳೆಯನ್ನು ಮದುವೆಯಾಗಿದ್ದ. ಬಳಿಕ ಪತ್ನಿಯನ್ನು ಜಾರ್ಖಂಡ್‌ ನಲ್ಲಿ ಬಿಟ್ಟು ತಮಿಳುನಾಡಿಗೆ ಮರಳಿದ್ದ. ಇಬ್ಬರೂ ತಮಿಳುನಾಡಿನಲ್ಲಿ ಕೆಲಸಾಡುತ್ತಿದ್ದರು. ಬೇರೊಬ್ಬ ಮಹಿಳೆಯನ್ನು ಮದುವೆಯಾಗಿದ್ದ ಆರೋಪಿಯು ಪ್ರೇಯಸಿಯನ್ನು ಜರಿಯಾಗಢ್ ಪೊಲೀಸ್ ಠಾಣೆಯ ಜೋರ್ದಾಗ್ ಗ್ರಾಮದ ತನ್ನ ಮನೆಯ ಸಮೀಪವಿರುವ ಕಾಡಿಗೆ ಕರೆದೊಯ್ದು ಕೊಲೆ ಮಾಡಿ ಶವವನ್ನು ಕೊಯ್ದಿದ್ದಾನೆ. ವ್ಯಕ್ತಿಯನ್ನು ಬಂಧಿಸಲಾಗಿದೆ” ಎಂದು ಖುಂಟಿ ಪೊಲೀಸ್ ವರಿಷ್ಠಾಧಿಕಾರಿ ಅಮನ್ ಕುಮಾರ್  ತಿಳಿಸಿದ್ದಾರೆ.

ಭೇಂಗ್ರಾನ ಮದುವೆಯ ಬಗ್ಗೆ ಅರಿಯದ ಮಹಿಳೆ, ಖುಂಟಿಗೆ ಕರೆದೊಯ್ಯುವಂತೆ ಒತ್ತಡ ಹೇರಿದ್ದಳು. ರಾಂಚಿ ತಲುಪಿದ ನಂತರ, ಅವರು ನವೆಂಬರ್ 24 ರಂದು ರೈಲು ಹತ್ತಿ ಭೇಂಗ್ರಾನ ಹಳ್ಳಿಗೆ ತೆರಳಿದ್ದರು .“ಆರೋಪಿ ಅವಳನ್ನು ತನ್ನ ಮನೆಯ ಸಮೀಪ ಆಟೋರಿಕ್ಷಾದಲ್ಲಿ ಕರೆದೊಯ್ದು ಕಾಯುವಂತೆ ಹೇಳಿ, ಚೂಪಾದ ಆಯುಧಗಳೊಂದಿಗೆ ಹಿಂತಿರುಗಿ, ಬಳಿಕ ಆಕೆಯ ಮೇಲೆ ಅತ್ಯಾಚಾರ ನಡೆಸಿ ನಂತರ ಆಕೆಯ ದುಪಟ್ಟಾದಿಂದ ಕತ್ತು ಹಿಸುಕಿ ನಂತರ ದೇಹವನ್ನು 40 ರಿಂದ 50 ತುಂಡುಗಳಾಗಿ ಕತ್ತರಿಸಿ ಅಲ್ಲಿಂದ ಹೊರಟು ಹೋಗಿದ್ದಾನೆ. ಬಳಿಕ ಊರಿಗೆ ಹೋಗಿಗೆ ತನ್ನ ಪತ್ನಿಯ ಜತೆ ವಾಸವಾಗಿದ್ದ” ಎಂದು ಪೊಲೀಸ್ ಮಾಹಿತಿ ನೀಡಿದ್ದಾರೆ. 

ಮೃತದೇಹದ ಅಂಗಾಂಗಗಳು ಪತ್ತೆಯಾಗಿದ್ದು, ಕೊಲೆಯಾದ ಮಹಿಳೆಯ ಆಧಾರ್ ಕಾರ್ಡ್ ಸೇರಿದಂತೆ ಸಾಮಾನುಗಳಿದ್ದ ಬ್ಯಾಗ್ ಕೂಡ ಕಾಡಿನಲ್ಲಿ ಪತ್ತೆಯಾಗಿದೆ. ಮಹಿಳೆಯ ತಾಯಿಯನ್ನು ಸ್ಥಳಕ್ಕೆ ಕರೆಸಿದಾಗ ಅವರು ತಮ್ಮ ಮಗಳ ವಸ್ತುಗಳನ್ನು ಗುರುತಿಸಿದ್ದಾರೆ.

Category
ಕರಾವಳಿ ತರಂಗಿಣಿ