ಕಲಬುರಗಿ: ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ನವಜಾತ ಶಿಶು ಕಳ್ಳತನ ಮಾಡಿ 50,000ಕ್ಕೆ ಮಾರಾಟ ಮಾಡಿದ್ದ ಮೂವರು ಕಳ್ಳಿಯರನ್ನು ಕಲಬುರಗಿ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.ಕಲಬುರಗಿಯ ಎಂ ಎಸ್ ಕೆ ಮಿಲ್ ಬಡಾವಣೆಯಲ್ಲಿ ಉಮೇರಾ, ನಸರೀನ್ ಹಾಗೂ ಫಾತಿಮಾ ಎಂಬ ಮೂವರು ಮಕ್ಕಳ ಕಳ್ಳಿಯರನ್ನು ಬಂಧಿಸಲಾಗಿದ್ದು, ನಂತರ ಮಗುವನ್ನು ರಕ್ಷಿಸಿ ತಾಯಿ ಕಸ್ತೂರಿ ಅವರಿಗೆ ಒಪ್ಪಿಸಲಾಗಿದೆ.
ಮಾರಾಟಕ್ಕಾಗಿ ಮಗು ಕಳ್ಳತನ ಮಾಡಿದ್ದ ಗ್ಯಾಂಗ್:
ಮೂವರು ಕಳ್ಳಿಯರ ಖತರ್ನಾಕ್ ಗ್ಯಾಂಗ್ ನವಜಾತ ಶಿಶುವನ್ನು ಮಾರಾಟಕ್ಕಾಗಿ ಕಿಡ್ನ್ಯಾಪ್ ಮಾಡಿತ್ತು. ಕಳ್ಳತನದ ಬಳಿಕ ಖೈರುನ್ ಎಂಬ ಮಹಿಳೆಗೆ 50 ಸಾವಿರ ರೂ.ಗೆ ಮಗುವನ್ನು ಮಾರಾಟ ಮಾಡಲಾಗಿತ್ತು.
ಮಾಧ್ಯಮಗಳಲ್ಲಿ ವರದಿ ಪ್ರಸಾರವಾದ ಬಳಿಕ ಅಕ್ಕ ಪಕ್ಕದ ನಿವಾಸಿಗಳಿಂದ ಮಗು ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದ್ದು, ಕೂಡಲೇ ಎಚ್ಚೆತ್ತ ಪೊಲೀಸರು ಮಗುವನ್ನು ರಕ್ಷಿಸಿ, ಕಳ್ಳಿಯರನ್ನು ಬಂಧಿಸಿದ್ದಾರೆ. ಸದ್ಯ ಪ್ರಕರಣದ ಬಳಿಕ ಮಗು ಖರೀದಿಸಿದ ಆರೋಪಿ ಖೈರುನ್ ಎಸ್ಕೇಪ್ ಆಗಿದ್ದು, ಆಕೆಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ