ಮಂಗಳೂರು : ಉಳ್ಳಾಲ ತಾಲೂಕು ಬಾಳೆ ಪುನಿ ಗ್ರಾಮದಲ್ಲಿ 3 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಬಗ್ಗೆ ಮಂಗಳೂರು ನಗರ ಪೊಲೀಸರು ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
3 ವರ್ಷದ ಮಗು ಅಡಿಕೆ ಅಂಗಡಿಯೊಂದರ ಬಳಿ ಆಟವಾಡುತ್ತಿದ್ದಾಗ ಮಗುವಿನೊಂದಿಗೆ ಅನುಚಿತ ದೈಹಿಕ ಸಂಪರ್ಕ ಮಾಡಿರುವ ವೃದ್ಧನನ್ನು ಮೂಡಣಗಾರಕಟ್ಟೆಯಲ್ಲಿ ವಾಸವಾಗಿರುವ ಅಹ್ಮದ್ ಕುಂಞಿ ಎಂಬವರ ಪುತ್ರ 70 ವರ್ಷದ ಅಬ್ದುಲ್ಲಾ ಎಂದು ಗುರುತಿಸಲಾಗಿದೆ. ಮಗುವಿನಲ್ಲಿ ಅಸ್ವಸ್ಥತೆಯನ್ನು ಗಮನಿಸಿದ ನಂತರ ಮಗುವಿನ ತಾಯಿ ಮಗುವಿಗೆ ಚಿಕಿತ್ಸೆ ಕೊಡಿಸಿದ್ದಾರೆ ಎನ್ನಲಾಗಿದೆ.
ತಾಯಿಯ ದೂರಿನ ಮೇರೆಗೆ ಕೊಣಾಜೆ ಪಿಎಸ್ ನಲ್ಲಿ ಸಿಆರ್ ನಂ: 137/24 ಯು/ಸೆ 9, 10 ಮತ್ತು 12 ಪೋಕ್ಸೋ ಕಾಯ್ದೆ ಮತ್ತು ಕಲಂ 65 ಬಿಎನ್ ಎಸ್ ನಂತೆ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದಿದೆ.