ಮಂಗಳೂರು : ಮಹಾನಗರ ಪಾಲಿಕೆ ವ್ಯಾಪ್ತಿಯ ಕೊಡಿಯಾಲಬೈಲ್ ಗ್ರಾಮದ ಕಂಬಳಕ್ರಾಸ್ ಬಳಿಯಲ್ಲಿರುವ ಎಸ್ ಎಸ್ ಕಾಂಪೌಂಡ್ ಕಟ್ಟಡದ ಮೊದಲನೆ ಮಹಡಿಯಲ್ಲಿ ಕರ್ನಾಟಕ ಅಬಕಾರಿ ಕಾಯ್ದೆಯ ವಿರುದ್ದವಾಗಿ ಸಂಗ್ರಹಿಸಿಟ್ಟಿದ್ದ ಡಿಫೆನ್ಸ್ ಮದ್ಯ- 19.5 litres, ಗೋವಾ ರಾಜ್ಯದ ಮದ್ಯ- 52.5 litres, ಕರ್ನಾಟಕ ರಾಜ್ಯದ ಮದ್ಯ- 3 litres, ತೆರಿಗೆರಹಿತ ವಿದೇಶ ಮದ್ಯ - 3 litres, ಗೋವಾ ರಾಜ್ಯದ ಬಿಯರ - 21.5 litres, ಕರ್ನಾಟಕ ರಾಜ್ಯದ ಬಿಯರ್-0.33 litres, ಡಿಫೆನ್ಸ ಬಿಯರ್- 1.3 litresಒಟ್ಟು: 101.30 litres(IML+BEER) ನ್ನು ಅಭಕಾರಿ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ.
ಈ ಕಾರ್ಯಾಚರಣೆಯು 16-11-2024ರಂದು ಮದ್ಯರಾತ್ರಿ 00:05 ಗಂಟೆ ಸಮಯಕ್ಕೆ ಮಾನ್ಯ ಅಬಕಾರಿ ಜಂಟಿ ಆಯುಕ್ತರು ಜಾರಿ ಮತ್ತು ತನಿಖೆ, ಮಂಗಳೂರು ವಿಭಾಗರವರ ಆದೇಶದಂತೆ ,ಅಬಕಾರಿ ಉಪ ಆಯುಕ್ತರು ದ.ಕ.ಜಿಲ್ಲೆರವರ ನಿರ್ದೇಶನದಂತೆ ,ಅಬಕಾರಿ ಉಪ ಅಧೀಕ್ಷಕರು ಮಂಗಳೂರು ಉಪ ವಿಭಾಗ 1ರವರ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕರು, ಮಂಗಳೂರು ಉಪ ವಿಭಾಗ-1, ಅಬಕಾರಿ ಉಪ ನಿರೀಕ್ಷಕರು, ಮಂಗಳೂರು ದಕ್ಷಿಣ ವಲಯ-1, ಅಬಕಾರಿ ಉಪ ನಿರೀಕ್ಷಕರು ಮಂಗಳೂರು ಉಪವಿಭಾಗ 1 ಮತ್ತು ಸಿಬ್ಬಂದಿಯವರೊಂದಿಗೆ ನಡೆದಿದ್ದು, ಯಾವುದೇ ದಾಖಲಾತಿಗಳಿಲ್ಲದೆ ಮಾರಾಟ ಮಾಡುವ ಉದ್ದೇಶದಿಂದ ಮದ್ಯವನ್ನು ಹೊಂದಿದ್ದು ಕರ್ನಾಟಕ ಅಬಕಾರಿ ಕಾಯ್ದೆ 1965 ರ ನಿಯಮ 14, 15 ರಂತೆ ಅಪರಾಧವಾಗಿದ್ದು ಕಲಂ 32(1), 38(ಎ) ಮತ್ತು 43(ಎ) ರಂತೆ ಶಿಕ್ಷಾರ್ಹವಾಗಿ ರುವುದರಿಂದ ಈ ಬಗ್ಗೆ ಮೊಕದ್ದಮೆಯನ್ನು ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಅಮೀತ್ ಎ ಪಿ ಎಂಬ ಆರೋಪಿಯು ತಲೆಮರೆಸಿಕೊಂಡಿದ್ದು ತನಿಖೆಯಲ್ಲಿ ಪತ್ತೆಹಚ್ಚಬೇಕಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.