ಹೆಬ್ರಿ : ಹೆಬ್ರಿ ತಾಲೂಕಿನ ಕಬ್ಬಿನಾಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ನಕ್ಸಲ್ ನಿಗ್ರಹ ಪಡೆ (ಎಎನ್‌ಎಫ್) ಸಿಬ್ಬಂದಿ ಖ್ಯಾತ ನಕ್ಸಲ್ ನಾಯಕ ವಿಕ್ರಮ್ ಗೌಡನನ್ನು ಹತ್ಯೆಗೈದಿದ್ದಾರೆ. ಈ ಘಟನೆಯು ಉಡುಪಿ ಜಿಲ್ಲೆಯಲ್ಲಿ 13 ವರ್ಷಗಳ ನಂತರ ವರದಿಯಾದ ಮೊದಲ ಎನ್‌ಕೌಂಟರ್ ಆಗಿದೆ. ಉಡುಪಿ ಜಿಲ್ಲೆಯಲ್ಲಿ 13 ವರ್ಷಗಳ ಹಿಂದೆ ಕಾರ್ಕಳ ತಾಲೂಕಿನ ಈಡು ಗ್ರಾಮದಲ್ಲಿ ಕೊನೆಯ ನಕ್ಸಲ್ ಎನ್‌ಕೌಂಟರ್ ನಡೆದಿತ್ತು.
ಪ್ರದೇಶದಲ್ಲಿ ನಕ್ಸಲ್ ಚಟುವಟಿಕೆಯ ಬಗ್ಗೆ ಬಲವಾದ ಗುಪ್ತಚರ ಆಧಾರದ ಮೇಲೆ ಎಎನ್‌ಎಫ್ ನಡೆಸಿದ ಕೂಂಬಿಂಗ್ ಕಾರ್ಯಾಚರಣೆಯ ಸಂದರ್ಭದಲ್ಲಿ ಎನ್‌ಕೌಂಟರ್ ಸಂಭವಿಸಿದೆ. ಮೂಲಗಳ ಪ್ರಕಾರ, ಕಾರ್ಯಾಚರಣೆಯ ಸಮಯದಲ್ಲಿ ಐವರು ನಕ್ಸಲ್ ಕಾರ್ಯಕರ್ತರ ಗುಂಪನ್ನು ಎಎನ್‌ಎಫ್ ತಂಡ ಗುರುತಿಸಿದೆ. ನಕ್ಸಲರು ಗುಂಡು ಹಾರಿಸಿದ ಹಿನ್ನೆಲೆ, ಎಎನ್‌ಎಫ್ ತಂಡ ಇದು ವಿಕ್ರಮ್ ಗೌಡನ ನನ್ನು ಎನಕೌಂಟರ್ ಮಾಡಿದೆ. ಉಳಿದ ನಕ್ಸಲರು ದಟ್ಟ ಅರಣ್ಯಕ್ಕೆ ಪರಾರಿಯಾಗಿದ್ದರೆಂದು ವರದಿಯಾಗಿದೆ.
ಅಗತ್ಯ ಸಾಮಗ್ರಿಗಳನ್ನು ಪಡೆಯಲು ಸೋಮವಾರ ತಡರಾತ್ರಿ ನಕ್ಸಲರು ಕಬ್ಬಿನಾಲೆ ಗ್ರಾಮಕ್ಕೆ ಭೇಟಿ ನೀಡಿತ್ತು ಎನ್ನಲಾಗಿದೆ. ನಕ್ಸಲ್ ಚಲನವಲನಗಳ ಬಗ್ಗೆ ವಿಶ್ವಾಸಾರ್ಹ ಮಾಹಿತಿಯ ನಂತರ ಎಎನ್‌ಎಫ್ ಈ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆಯನ್ನು ತೀವ್ರಗೊಳಿಸಿತ್ತು. ಕಬ್ಬಿನಾಲೆ ಮೂಲದ ವಿಕ್ರಮ್ ಗೌಡ ಅವರು ನಕ್ಸಲ್ ಚಳವಳಿಯ ಘಟಕದ ಕಮಾಂಡರ್ ಆಗಿದ್ದು, ನಕ್ಸಲ್ ಕಾರ್ಯಾಚರಣೆಗಳಲ್ಲಿ ಅವರ ಪಾಲ್ಗೊಳ್ಳುವಿಕೆ ಅವರನ್ನು ಕಾನೂನು ಜಾರಿ ಸಂಸ್ಥೆಗಳಿಗೆ ಪ್ರಮುಖ ಗುರಿಯಾಗಿಸಿತ್ತು.