ಮಂಗಳೂರು: ನಗರದ ಗೋರಿಗುಡ್ಡೆ ನಿವಾಸಿ ಚಂದ್ರಕಾಂತ್ ಎಂಬವರ ಮನೆಯ ಮೇಲೆ ಅಕ್ರಮವಾಗಿ ಸಂಗ್ರಹಿಸಿದ್ದ ವಿವಿಧ ಗೋವಾ ರಾಜ್ಯದ ಮದ್ಯಗಳನ್ನು ಅಬಕಾರಿ ಇಲಾಖೆಯು ದಾಳಿ ಮಾಡಿ ವಶಪಡಿಸಿಕೊಂಡಿದೆ. ಒಟ್ಟು ಮದ್ಯ 47 ಲೀಟರ್ ವಶಪಡಿಸಲಾಗಿದ್ದು, ಅಂದಾಜು ಮೌಲ್ಯ ರೂ 64,500 ಆಗಿದೆ.
ಇನ್ನೊಂದು ಪ್ರಕರಣದಲ್ಲಿ ಶ್ಯಾಮ ಸುಂದರ ನಂಬಿಯಾರ್ ಸೂಟರ್ ಪೇಟೆ ಎಂಬುವವರು ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ "ಸೈನಿಕರಿಗೆ ಮಾತ್ರ ಮಾರಾಟ" ಎಂದು ಲೇಬಲ್ ಇರುವ ವಿವಿಧ ಬ್ರಾಂಡ್ ಗಳ ಮಧ್ಯವನ್ನು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮಾರಾಟದ ಉದ್ದೇಶದಿಂದ ಸಾಗಿಸುತ್ತಿದ್ದು ಅಬಕಾರಿ ಇಲಾಖೆ ಮಧ್ಯವನ್ನು ವಶಪಡಿಸಿಕೊಂಡು ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
11.250 ಲೀಟರ್ ಮಧ್ಯ ಹಾಗೂ ಸಾಗಾಟಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ಇಲಾಖೆ ವಶಕ್ಕೆ ಪಡೆದುಕೊಂಡಿದೆ. ಒಂದು ಲಕ್ಷ ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.
ಎರಡು ಪ್ರತ್ಯೇಕ ಪ್ರಕರಣಗಳನ್ನು ಅಬಕಾರಿ ನಿರೀಕ್ಷಕ ಕಮಲ ಎಚ್ ಎನ್ ವಲಯ -2 ಅವರು ದಾಖಲಿಸಿದ್ದು, ಸಿಬ್ಬಂದಿಗಳಾದ ಸುನಿಲ್ ಬೈಂದೂರು, ಬಸವರಾಜ್ ತೋರೆ, ನವೀನ್ ನಾಯಕ್ ಬಿ, ರಘುರಾಮ್, ಪವನ್ ಕುಮಾರ್ ಸಹಕರಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.