image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮುಲ್ಕಿಯಲ್ಲಿ ನಡೆದ ಹತ್ಯೆ ಮತ್ತು ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ : ಕಾರ್ತಿಕ್ ತಾಯಿ ಮತ್ತು ಅಕ್ಕನ ಬಂಧನ

ಮುಲ್ಕಿಯಲ್ಲಿ ನಡೆದ ಹತ್ಯೆ ಮತ್ತು ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ : ಕಾರ್ತಿಕ್ ತಾಯಿ ಮತ್ತು ಅಕ್ಕನ ಬಂಧನ

ಮುಲ್ಕಿ: : ಇಲ್ಲಿನ ಪಕ್ಷಕೆರೆಯಲ್ಲಿ ಪತ್ನಿ ಮತ್ತು ಮಗುವನ್ನು ಕೊಂದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ತಿಕ್ ನ ಹೆಂಡಿತಿಯ ಸಂಬಂಧಿಕರು ಕೊಟ್ಟ ದೂರಿನ ಹಿನ್ನಲೆ ಆತನ ತಾಯಿ ಶ್ಯಾಮಲಾ ಹಾಗೂ ಅಕ್ಕ ಕಣ್ಮಣಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಪಕ್ಷಕೆರೆಯ ಕಾರ್ತಿಕ್ ಭಟ್ ತನ್ನ ಪತ್ನಿ ಪ್ರಿಯಾಂಕಾ ಮತ್ತು ನಾಲ್ಕು ವರ್ಷದ ಮಗು ಹೃದಯ್ ನನ್ನು ಪಕ್ಷಿಕೆರೆಯ ಮನೆಯಲ್ಲಿ ಕೊಲೆ ಮಾಡಿ, ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ಶುಕ್ರವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೂವರ ಅಂತ್ಯಕ್ರಿಯೆ ಭಾನುವಾರ ನಡೆದಿತ್ತು.

ಕಾರ್ತಿಕ್ ಭಟ್ ಈ ಕೃತ್ಯ ನಡೆಸಿ ಆತ್ಮಹತ್ಯೆ ಮಾಡಿಕೊಳ್ಳಲು ಆತನ ತಾಯಿ ಮತ್ತು ಅಕ್ಕ ಮಾನಸಿಕ ಕಿರುಕುಳ ನೀಡಿದ್ದೇ ಕಾರಣ ಎಂದು ಆರೋಪಿಸಿ ಪ್ರಿಯಾಂಕಾ  ತಾಯಿ ಸಾವಿತ್ರಿ ಮೂಲ್ಕಿ ಠಾಣೆಗೆ ದೂರು ನೀಡಿದ್ದರು. ಕಾರ್ತಿಕ್ ಆತ್ಮಹತ್ಯೆಗೂ ಮುನ್ನ ಬರೆದಿಟ್ಟ ಡೆತ್ ನೋಟ್ ನಲ್ಲೂ ಅಕ್ಕ ಹಾಗೂ ತಾಯಿ ವಿರುದ್ದ ಆರೋಪ ಮಾಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Category
ಕರಾವಳಿ ತರಂಗಿಣಿ