ಮಂಗಳೂರು: ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಕುಖ್ಯಾತ ದನಗಳ್ಳರನ್ನು ಬಂಧಿಸಿ, ಜಾನುವಾರು ಹತ್ಯ ಪ್ರತಿಬಂಧಕ ಮತ್ತು ಸಂರಕ್ಷಣಾ ಅದ್ಯಾದೇಶ- 2020 ಕಲಂ 303(1) ಬಿ ಎನ್ ಎಸ್ 2023 ಕಾಯಿದೆಯಂತೆ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು, ಪೈಜಲ್ @ಪೈಜಲ್ ಕೊಂಚಾರ್ ಪ್ರಾಯ 40 ವರ್ಷ ತಂದೆ: ಅಬ್ದುಲ್ ರಜಾಕ್ ವಾಸ: ಬದ್ರಿಯಾನಗರ ಕೊಂಚಾರು ಕೊಳಂಬೆ ಪೇಜಾವರ ಮಂಗಳೂರು ಮತ್ತು ಸುಹೈಬ್ ಅಕ್ತರ್ ಪ್ರಾಯ 24 ವರ್ಷ ತಂದೆ: ಅಬ್ದುಲ್ ರೆಹಮಾನ್ ವಾಸ: ಕೊಡಿ ಉಳ್ಳಾಲ ಮಂಗಳೂರವರನ್ನು ಬಂಧಿಸಿ ಕೃತ್ಯಕ್ಕೆ ಬಳಿಸಿ ರಿಡ್ಜ್ ಕಾರ್ ಹಾಗೂ ಫ್ಯಾಸಿನೋ ಸ್ಕೂಟರ್ ನ್ನು ಸ್ವಾಧಿನಪಡಿಸಿಕೊಂಡು ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರು ಪಡಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪೈಜಲ್ @ಪೈಜಲ್ ಕೊಂಚಾರ್ ಬಜ್ಜೆ ಠಾಣೆಯಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಮತ್ತು ಪ್ರಕರಣಗಳಲ್ಲಿ ದನ ಕಳ್ಳತನದಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ಕಂಡುಬಂದಿದ್ದು, ಈ ಹಿಂದೆ ಪೈಜಲ್ @ಪೈಜಲ್ ಕೊಂಚಾರ್ ಎಂಬುವನ ಮೇಲೆ ಒಟ್ಟು 12 ದನ ಕಳ್ಳತನ ಪ್ರಕರಣ ದಾಖಲಾಗಿದ್ದು ಅದರಲ್ಲಿ ಬಜ್ಜೆ ಪೊಲೀಸ್ ಠಾಣೆಯಲ್ಲಿ 07 ಪ್ರಕರಣಗಳು. ಉಡುಪಿಯ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ 01 ಪ್ರಕರಣಗಳು ಶಿರಸಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ 02 ಪ್ರಕರಣಗಳಾಗಿದೆ.