ಮಂಗಳೂರು: ಬೈಕ್ ಸ್ಕಿಡ್ ಆಗಿ ಸಹಸವಾರ ಮೃತವಾಗಿ, ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಮಹಾಕಾಳಿ ಪಡ್ಡು ಬಳಿ ನಡೆದಿದೆ.
ಮೊಹಮ್ಮದ್ ಶಾಕಿರ್ ಎಂಬವನು ಸಲ್ಮಾನ್ ಫಾರೀಶ್ ಎಂಬಾತನನ್ನು ಬೈಕ್‌ನಲ್ಲಿ ಕುಳ್ಳಿರಿಸಿಕೊಂಡು ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ ಸಂಜೆ 4.50ರ ವೇಳೆಗೆ ಅತಿವೇಗದಿಂದ ಬೈಕ್ ಚಲಾಯಿಸಿಕೊಂಡು ಬಂದು ಮಹಾಕಾಳಿ ಪಡ್ಡು ಬಳಿ ಮೋಟಾರ್ ಸೈಕಲ್ ಸ್ಕಿಡ್ ಆಗಿ ನೇತ್ರಾವತಿ ಸೇತುವೆಗೆ ಅಳವಡಿಸಿದ ಕಬ್ಬಿಣದ ತಗಡು ಶೀಟ್‌ಗೆ ಡಿಕ್ಕಿಯಗಿದೆ. ಇದರ ಪರಿಣಾಮ ಬೈಕ್ ಸವಾರರಿಬ್ಬರೂ ರಸ್ತೆಗೆ ಬಿದ್ದಿದ್ದಾರೆ.ಈ ವೇಳೆ ಸಲ್ಮಾನ್ ಫಾರೀಶ್ ಗಂಭೀರ ಗಾಯಗೊಂಡು ಮತಪಟ್ಟಿದ್ದು, ಸವಾರ ಮೊಹಮ್ಮದ್ ಶಾಕೀರ್ ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆಗೆ ಚಿಕಿತ್ಸೆ ಪಡೆಯುತ್ತಿದ್ದಾನೆ.