image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಶಾಸಕ ಸತೀಶ್‌ ಸೈಲ್‌ ಗೆ ಜೈಲು ಶಿಕ್ಷೆ ಪ್ರಕಟ; ಸುಮಾರು 30 ಕೋಟಿಗೂ ಹೆಚ್ಚು ದಂಡ

ಶಾಸಕ ಸತೀಶ್‌ ಸೈಲ್‌ ಗೆ ಜೈಲು ಶಿಕ್ಷೆ ಪ್ರಕಟ; ಸುಮಾರು 30 ಕೋಟಿಗೂ ಹೆಚ್ಚು ದಂಡ

ಬೆಂಗಳೂರು: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಕಾಯ್ದಿರಿಸಿದ್ದ ಶಾಸಕ ಸತೀಶ್‌ ಸೈಲ್‌ ಸೇರಿದಂತೆ ಇತರರ ಶಿಕ್ಷೆಯ ಪ್ರಮಾಣದ ತೀರ್ಪನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಇಂದು ಪ್ರಕಟಿಸಿದೆ.

ಅದಿರು ನಾಪತ್ತೆ ಪ್ರಕರಣದಲ್ಲಿ ಕಾರವಾರ ಶಾಸಕ ಸತೀಶ್‌ ಸೈಲ್‌ ಅವರಿಗೆ ಒಳಸಂಚು ಪ್ರಕರಣದಲ್ಲಿ ಐದು ವರ್ಷ ಜೈಲು ಶಿಕ್ಷೆ, ವಂಚನೆ ಪ್ರಕರಣದಲ್ಲಿ ಏಳು ವರ್ಷ ಶಿಕ್ಷೆ ಪ್ರಕಟವಾಗಿದ್ದು, ಅಲ್ಲದೆ ಕಳ್ಳತನ ಪ್ರಕರಣದಲ್ಲಿ ಮೂರು ವರ್ಷ ಜೈಲು ಶಿಕ್ಷೆ ನೀಡಿ ಕೋರ್ಟ್‌ ಆದೇಶಿಸಿದೆ. ಅಲ್ಲದೆ ಎಲ್ಲಾ ಪ್ರಕರಣಗಳೂ ಸೇರಿ ಸುಮಾರು 30 ಕೋಟಿಗೂ ಹೆಚ್ಚು ದಂಡ ವಿಧಿಸಿದೆ.

ಸತೀಶ್‌ ಸೈಲ್‌ ಅವರಿಗೆ ಎರಡು ವರ್ಷಕ್ಕಿಂತ ಹೆಚ್ಚಿನ ಶಿಕ್ಷೆ ಪ್ರಕಟವಾದ ಕಾರಣ ಅವರ ಶಾಸಕ ಸ್ಥಾನ ರದ್ದಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಶಾಸಕ ಸತೀಶ್‌ ಸೈಲ್‌ ಮತ್ತು ಅಂದಿನ ಬಂದರು ಅಧಿಕಾರಿ ಮಹೇಶ್‌ ಬಿಳಿಯ ಸೇರಿ 7 ಮಂದಿ ದೋಷಿಗಳು ಎಂದು ನ್ಯಾ| ಸಂತೋಷ್‌ ಗಜಾನನ ಭಟ್‌  ತೀರ್ಪು ಪ್ರಕಟಿಸಿದ್ದರು. ಶಿಕ್ಷೆಯ ಪ್ರಮಾಣವನ್ನು ಶುಕ್ರವಾರ ಪ್ರಕಟಿಸುವುದಾಗಿ ನ್ಯಾಯಾಲಯವು ಹೇಳಿತ್ತು. ಶುಕ್ರವಾರ ಮತ್ತೆ ವಾದ-ಪ್ರತಿವಾದ ನಡೆದ ಹಿನ್ನೆಲೆಯಲ್ಲಿ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯವು ಶನಿವಾರಕ್ಕೆ ಕಾಯ್ದಿರಿಸಿತ್ತು. ಹಾಗಾಗಿ ಇಂದು ಶಿಕ್ಷೆ ಪ್ರಕಟವಾಗಿದೆ.

Category
ಕರಾವಳಿ ತರಂಗಿಣಿ