ಮಂಗಳೂರು: ಕಿಡಿಗೇಡಿಗಳು ಮಂಗಳೂರು ಕಮಿಷನರೇಟ್ ಆಯುಕ್ತರಾದ ಅನುಪಮ್ ಅಗರ್ವಾಲ್ ಹೆಸರಿನಲ್ಲಿ ಫೇಸ್ ಬುಕ್ ಖಾತೆ ತೆರೆದು, ಪ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿರುವ ಘಟನೆ ನಡೆದಿದೆ.
ಇದರ ಮದ್ಯೆ ಕಿಡಿಗೇಡಿಗಳು ಪತ್ರಕರ್ತರೊಬ್ಬರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದು, ಇದರ ಬಗ್ಗೆ ಪ್ರತಿಕ್ರಿಯೆ ನೀಡಿದ ಪೊಲೀಸ್ ಆಯುಕ್ತರಾದ ಅನುಪಮ ಅಗರ್ವಾಲ್ "ಇದು ಫೇಕ್ ಅಕೌಂಟ್ ಆಗಿದ್ದು, ಇದರ ಬಗ್ಗೆ ಪ್ರಕರಣ ದಾಖಲಿಸಲಾಗುತ್ತದೆ" ಎಂದು ತಿಳಿಸಿದ್ದಾರೆ.