image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

2015ರ ಮಾಡೂರು ಯುಸೂಫ್ ಹತ್ಯೆ ಪ್ರಕರಣ: 5 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ

2015ರ ಮಾಡೂರು ಯುಸೂಫ್ ಹತ್ಯೆ ಪ್ರಕರಣ: 5 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ

ಮಂಗಳೂರು ನಗರದ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗಳೂರು ಕಾರಾಗೃಹದಲ್ಲಿ 2015ರ ನವೆಂಬರ್ 2 ರಂದು ನಡೆದಿದ್ದ ಕುಖ್ಯಾತ ಮಾಡೂರು ಯುಸೂಫ್ ಹತ್ಯೆ ಪ್ರಕರಣದಲ್ಲಿ ಐವರು ಆರೋಪಿಗಳಿಗೆ ಮಾನ್ಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ತಲಾ 76,000 ರೂ. ದಂಡ ವಿಧಿಸಿ ಮಹತ್ವದ ತೀರ್ಪು ಪ್ರಕಟಿಸಿದೆ.

ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಜಗದೀಶ್ ವಿ. ಎನ್. ರವರು, 2026ರ ಅಕ್ಟೋಬರ್ 1 ರಂದು ಈ ತೀರ್ಪು ನೀëಡಿದ್ದಾರೆ. ಲಿತೇಶ್ ಪೂಜಾರಿ @ ಲಿತ್ತು (ಸೂರಿಂಜೆ, ಕಾಟಿಪಳ್ಳ), ಶೋಭರಾಜ್ @ ಶೋಭಿ (ಸುರತ್ಕಲ್), ಯುವರಾಜ್ (ಕಾಟಿಪಳ್ಳ), ಪ್ರದೀಪ್ (ಉಳಾಯಿಬೆಟ್ಟು) ಹಾಗೂ ಉಮೇಶ್ ಕೊಂಬಾರ್ @ ಉಮೇಶ್ ಕುಂಬಾರ (ಸುಳ್ಯ) ಶಿಕ್ಷೆಗೆ ಒಳಗಾದ ಅಪರಾಧಿಗಳಾಗಿದ್ದಾರೆ.

ಮಂಗಳೂರು ಕಾರಾಗೃಹದ ಒಳಗೆ ಮಾಡೂರು ಯುಸೂಫ್ ಎಂಬುವರ ಮೇಲೆ ನಡೆದ ಈ ಭೀಕರ ದಾಳಿ ಹಾಗೂ ಹತ್ಯೆಗೆ ಸಂಬಂಧಿಸಿದಂತೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 92/2015 ರಡಿ ಐಪಿಸಿ ಕಲಂ 143, 144, 147, 148, 324, 326, 353, 332, 307, 302, 120(ಬಿ), 37 ಜೊತೆಗೆ 149 ರಡಿ ಪ್ರಕರಣ ದಾಖಲಾಗಿತ್ತು. ಅಂದಿನ ಮಂಗಳೂರು ಕೇಂದ್ರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾಗಿದ್ದ ಶ್ರೀ ತಿಲಕ್ ಚಂದ್ರ ರವರು ಸಮಗ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕರಾದ ಶ್ರೀ ಬಿ. ಮೋಹನ್ ಕುಮಾರ್ ರವರು ವಾದ ಮಂಡಿಸಿದ್ದರು.

Category
ಕರಾವಳಿ ತರಂಗಿಣಿ