ಮಂಗಳೂರು: ನಂತೂರಿನಿಂದ ಪಂಪ್ ವೆಲ್ ಕಡೆ ಹೋಗುತ್ತಿದ್ದ ಮೀನು ಸಾಗಾಟದ ಕಂಟೈನರ್ ವಾಹನವೊಂದು ಮುಂದೆ ಹೋಗುತ್ತಿದ್ದ ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ನಲ್ಲಿದ್ದ ಕ್ರಿಸ್ತಿ ಕ್ರಾಸ್ತಾ ಎನ್ನುವ 27 ವರ್ಷದ ಯುವತಿ ಸಾವನ್ನಪ್ಪಿರುವ ಘಟನೆ ನಗರದ ನಂತೂರು ಪಂಪ್ ವೆಲ್ ರಸ್ತೆಯ ಶಾಂತಿ ಕಿರಣ ಕಟ್ಟಡದ ಎದುರುಗಡೆ ನಡೆದಿದೆ.
ಇಲ್ಲಿ ಕಂಟೈನರ್ ಚಾಲಕನ ಅಜಾಗರೂಕತೆಯಿಂದ ಅಪಘಾತವಾಗಿದೆ ಎಂದು ತಿಳಿದುಬಂದಿದ್ದು, ಈ ಬಗ್ಗೆ ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ಮೊ. ಸಂಖ್ಯೆ 152/24 ಕಲ0 281, 106(1) ಬಿಎನ್ ಎಸ್ ರಂತೆ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.