image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪಾಕಿಸ್ತಾನ ಪರ ಬೇಹುಗಾರಿಕೆ: ದೆಹಲಿಯಲ್ಲಿ ದಂಪತಿ ಬಂಧನ

ಪಾಕಿಸ್ತಾನ ಪರ ಬೇಹುಗಾರಿಕೆ: ದೆಹಲಿಯಲ್ಲಿ ದಂಪತಿ ಬಂಧನ

ನವದೆಹಲಿ : ದೆಹಲಿ ಪೊಲೀಸರ ವಿಶೇಷ ಘಟಕವು ಪಾಕಿಸ್ತಾನ ಮೂಲದ ಬೇಹುಗಾರಿಕಾ ಜಾಲವೊಂದನ್ನು ಭೇದಿಸಿದ್ದು, ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದ ದಂಪತಿಯನ್ನು ಬಂಧಿಸಿದೆ. ಬಂಧಿತರನ್ನು ದೆಹಲಿ ನಿವಾಸಿಗಳಾದ ಮೊಹಮ್ಮದ್ ಸಾಹಿಲ್ ಮತ್ತು ಆತನ ಪತ್ನಿ ಸಮೀರಾ ಎಂದು ಗುರುತಿಸಲಾಗಿದೆ. ಈ ದಂಪತಿ 2024ರಿಂದ ಸಾಮಾಜಿಕ ಮಾಧ್ಯಮಗಳ ಮೂಲಕ ಪಾಕಿಸ್ತಾನಿ ಗುಪ್ತಚರ ಸಂಸ್ಥೆಯ ಏಜೆಂಟ್‌ಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪಾಕಿಸ್ತಾನ ಪರ ಗುಪ್ತಚರ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆಯ ಪ್ರಕಾರ, ಆರೋಪಿಗಳು ಸ್ಥಳೀಯರ ನೆರವಿನಿಂದ ಭಾರತೀಯ ಸಿಮ್ ಕಾರ್ಡ್‌ಗಳನ್ನು ಪಡೆದುಕೊಂಡು, ಅವುಗಳನ್ನು ದುಬೈ ಮಾರ್ಗವಾಗಿ ಪಾಕಿಸ್ತಾನಕ್ಕೆ ರವಾನಿಸುತ್ತಿದ್ದರು. ಪಾಕಿಸ್ತಾನ ತಲುಪಿದ ಈ ಸಿಮ್ ಕಾರ್ಡ್‌ಗಳ ಮೂಲಕ ವಾಟ್ಸಾಪ್ ಖಾತೆಗಳನ್ನು ಸಕ್ರಿಯಗೊಳಿಸಿ, ಭಾರತೀಯ ನಾಗರಿಕರ ಸಂಪರ್ಕ ಪಟ್ಟಿಗಳು ಹಾಗೂ ವಿವಿಧ ವಾಟ್ಸಾಪ್ ಗ್ರೂಪ್‌ಗಳಿಂದ ಸೂಕ್ಷ್ಮ ಮಾಹಿತಿಗಳನ್ನು ಸಂಗ್ರಹಿಸಲು ಯತ್ನಿಸಲಾಗುತ್ತಿತ್ತು.

ಸಾಹಿಲ್ 2024ರಲ್ಲಿ ಇನ್‌ಸ್ಟಾಗ್ರಾಮ್ ಮೂಲಕ ಪಾಕಿಸ್ತಾನಿ ಏಜೆಂಟ್ ಸಂಪರ್ಕಕ್ಕೆ ಬಂದಿದ್ದನು. ಈ ಪರಿಚಯಕ್ಕೆ ಸಮೀರಾ ಮಧ್ಯವರ್ತಿಯಾಗಿದ್ದು, ನಂತರ ಸಾಹಿಲ್ ಆಕೆಯನ್ನೇ ವಿವಾಹವಾಗಿದ್ದನು. ಈ ಜಾಲದ ಪರವಾಗಿ ಕೆಲಸ ಮಾಡಿದರೆ ಆರ್ಥಿಕ ನೆರವು ನೀಡುವುದಾಗಿ ಪಾಕಿಸ್ತಾನಿ ನಿರ್ವಾಹಕ ಭರವಸೆ ನೀಡಿದ್ದರಿಂದ ದಂಪತಿ ಈ ಅಕ್ರಮ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಪ್ರಸ್ತುತ ದೆಹಲಿ ಪೊಲೀಸರ ವಿಶೇಷ ಘಟಕವು ಪ್ರಕರಣದ ತನಿಖೆ ಮುಂದುವರಿಸಿದ್ದು, ವಿದೇಶಿ ಹ್ಯಾಂಡ್ಲರ್‌ಗಳ ಪಾತ್ರ ಹಾಗೂ ಈ ಜಾಲದಲ್ಲಿದ್ದ ಇತರರನ್ನು ಪತ್ತೆಹಚ್ಚುವ ಕಾರ್ಯ ನಡೆಸುತ್ತಿದೆ. ಸಾಹಿಲ್ 2024ರಲ್ಲಿ ಇನ್‌ಸ್ಟಾಗ್ರಾಮ್ ಮೂಲಕ ಪಾಕಿಸ್ತಾನಿ ಏಜೆಂಟ್ ಒಬ್ಬರ ಸಂಪರ್ಕಕ್ಕೆ ಬಂದಿದ್ದು, ಇದರಲ್ಲಿ ಸಮೀರಾ ಎಂಬಾಕೆ ಮಧ್ಯವರ್ತಿಯಾಗಿದ್ದಳು. ಆಕೆಯನ್ನೇ ಸಾಹಿಲ್ ಮದುವೆಯಾದ. ಆ ಪಾಕಿಸ್ತಾನಿ ಏಜೆಂಟ್ ನಂತರ ಈ ದಂಪತಿಯನ್ನು ಪಾಕಿಸ್ತಾನದ ಗುಪ್ತಚರ ವಿಭಾಗದ ಮತ್ತೊಬ್ಬ ಕಾರ್ಯಕರ್ತನಿಗೆ ಪರಿಚಯಿಸಿದ್ದಾನೆ. ಈ ಜಾಲದ ಪರವಾಗಿ ಕೆಲಸ ಮಾಡಿದಲ್ಲಿ ಆರ್ಥಿಕ ಬೆಂಬಲ ನೀಡುವುದಾಗಿ ಪಾಕಿಸ್ತಾನಿ ನಿರ್ವಾಹಕನೊಬ್ಬ ಭರವಸೆ ನೀಡಿದ್ದನೆಂದು ಆರೋಪಿಸಲಾಗಿದೆ. ಇದರ ಬೆನ್ನಲ್ಲೇ, ಆ ದಂಪತಿ ಸಿಮ್ ಕಾರ್ಡ್‌ಗಳನ್ನು ಸಂಗ್ರಹಿಸಿ ಪಾಕಿಸ್ತಾನಕ್ಕೆ ಕಳುಹಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಜಾಲದ ಕಾರ್ಯನಿರ್ವಹಣಾ ವಿಧಾನವನ್ನು ಪರಿಶೀಲಿಸಲು ಮತ್ತು ಇದರೊಂದಿಗೆ ಸಂಪರ್ಕ ಹೊಂದಿರುವ ಇತರರನ್ನು ಗುರುತಿಸಲು ಇದೀಗ ವಿಶೇಷ ಘಟಕ ಕಾರ್ಯನಿರ್ವಹಿಸುತ್ತಿದೆ. ಪಾಕಿಸ್ತಾನಕ್ಕೆ ಕಳುಹಿಸಲಾಗಿದ್ದ ಸಿಮ್ ಕಾರ್ಡ್‌ಗಳನ್ನು ಯಾರನ್ನು ಸಂಪರ್ಕಿಸಲು ಬಳಸಲಾಗಿತ್ತು. ಯಾವ ಮಾಹಿತಿಯನ್ನು ಸಂಗ್ರಹಿಸಲಾಗಿತ್ತು ಎಂಬುದನ್ನು ಪತ್ತೆ ಹಚ್ಚುವ ತನಿಖೆ ಸಾಗಿದೆ. ಜೊತೆಗೆ, ವಿದೇಶದಲ್ಲಿರುವ ಹ್ಯಾಂಡ್ಲರ್‌ಗಳ ಪಾತ್ರದ ಕುರಿತಾಗಿಯೂ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ