image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕಿವೀಸ್​​ ಬೌಲಿಂಗ್​ ದಾಳಿಗೆ ಭಾರತ ತತ್ತರ; 46ಕ್ಕೆ ಆಲೌಟ್

ಕಿವೀಸ್​​ ಬೌಲಿಂಗ್​ ದಾಳಿಗೆ ಭಾರತ ತತ್ತರ; 46ಕ್ಕೆ ಆಲೌಟ್

ಬೆಂಗಳೂರು​: ನ್ಯೂಜಿಲೆಂಡ್​ ವಿರುದ್ಧ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಭಾರತ ಅಲ್ಪಮೊತ್ತಕ್ಕೆ ಆಲೌಟ್ ಆಗುವ ಮೂಲಕ ಕೆಟ್ಟ್​ ದಾಖಲೆ ಬರೆದಿದೆ. ಈ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಆಯ್ದುಕೊಂಡ ಟೀಂ ಇಂಡಿಯಾ 46ರನ್​ಗಳಿಗೆ ಸರ್ವಪತನ ಕಂಡಿದೆ. ಇದರೊಂದಿಗೆ ಟೆಸ್ಟ್​ ಕ್ರಿಕೆಟ್​ನಲ್ಲಿ 3ನೇ ಬಾರಿಗೆ ಅಲ್ಪಮೊತ್ತಕ್ಕೆ ಆಲೌಟ್​ ಆಗಿ ಕಳಪೆ ದಾಖಲೆ ಬರೆಯಿತು. ಇದಕ್ಕೂ ಮೊದಲು 2020ರಲ್ಲಿ ಆಸ್ಟ್ರೇಲಿಯಾ ವಿರುದ್ಧ 36 ರನ್​, 1974ರಲ್ಲಿ ಇಂಗ್ಲೆಂಡ್​ ವಿರುದ್ಧ 42 ರನ್​ಗಳಿಗೆ ಆಲೌಟ್​ ಆಗಿತ್ತು.

ಈ ಪಂದ್ಯದಲ್ಲಿ ಭಾರತದ ಐವರು ಆಟಗಾರರು ಯಾವುದೇ ರನ್​ ಗಳಿಸದೇ ಡಕ್​ಔಟ್​ ಆಗಿದ್ದಾರೆ. ವಿರಾಟ್​ ಕೊಹ್ಲಿ, ಸರ್ಫರಾಜ್​ ಖಾನ್​, ಕೆ.ಎಲ್​ ರಾಹುಲ್​, ರವೀಂದ್ರ ಜಡೇಜಾ ಮತ್ತು ಅಶ್ವಿನ್​ ಶೂನ್ಯಕ್ಕೆ ನಿರ್ಗಮಿಸಿದ್ದಾರೆ. ಇದರೊಂದಿಗೆ ತವರಿನಲ್ಲಿ ನಡೆದ ಪಂದ್ಯದಲ್ಲಿ ಐವರು ಬ್ಯಾಟರ್​ಗಳು ಶೂನ್ಯ ಸುತ್ತಿದ್ದು ಇದೇ ಮೊದಲ ಬಾರಿಗೆ. ಉಳಿದಂತೆ ಭಾರತದ ಪರ ಯಾವೊಬ್ಬ ಬ್ಯಾಟರ್​ ಅರ್ಧಶತಕ ಸಿಡಿಸಲು ಸಾಧ್ಯವಾಗಿಲ್ಲ. ಆರಂಭಿಕ ಬ್ಯಾಟರ್​ ರೋಹಿತ್​ ಶರ್ಮಾ 2 ರನ್​ಗಳಿಗೆ ನಿರ್ಗಮಿಸಿದರೇ, ಜೈಸ್ವಾಲ್​ (13), ಪಂತ್​ (20) ಕೂಡ ಅತ್ಯಲ್ಪಮೊತ್ತಕ್ಕೆ ಕ್ರೀಸ್​ ತೊರೆದರು.

ಆರಂಭದಲ್ಲೆ ಭಾರತೀಯ ಬೌಲರ್​​ಗಳಿಗೆ ಕಡಿವಾಣ ಹಾಕುವಲ್ಲಿ ಕಿವೀಸ್​ ಬೌಲರ್​ಗಳು ಯಶಸ್ವಿಯಾಗಿದ್ದಾರೆ. ನ್ಯೂಜಿಲೆಂಡ್​ ಪರ ಮ್ಯಾತ್​ ಹೆನ್ರಿ 5 ವಿಕೆಟ್​ ಕಬಳಿಸಿದರೆ, ವಿಲಿಯಮ್​ ಓರೌಕಿ 4 ಮತ್ತು ಟಿಮ್​ ಸೌಥಿ 1 ವಿಕೆಟ್​ ಪಡೆದರು.

Category
ಕರಾವಳಿ ತರಂಗಿಣಿ