image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕಾಮನ್‌ವೆಲ್ತ್ ಪದಕ ವಿಜೇತರನ್ನು ಭೇಟಿಯಾದ ಪ್ರಧಾನಿ ಮೋದಿ: 'ಜೋ ಖೇಲೆಗಾ ವೋ ಖಿಲೇಗಾ' ಕರೆ

ಕಾಮನ್‌ವೆಲ್ತ್ ಪದಕ ವಿಜೇತರನ್ನು ಭೇಟಿಯಾದ ಪ್ರಧಾನಿ ಮೋದಿ: 'ಜೋ ಖೇಲೆಗಾ ವೋ ಖಿಲೇಗಾ' ಕರೆ

ನವದೆಹಲಿ : ಗ್ಲಾಸ್ಗೋ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಭೇಟಿಯಾಡಿ ಭಾರತಕ್ಕೆ ಮರಳಿರುವ ಕ್ರೀಡಾಪಟುಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ದೆಹಲಿಯ ತಮ್ಮ ನಿವಾಸದಲ್ಲಿ ಭೇಟಿಯಾಗಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಪದಕ ವಿಜೇತರೊಂದಿಗೆ ಸುದೀರ್ಘ ಸಂವಾದ ನಡೆಸಿದ ಪ್ರಧಾನಿಯವರು, ಅವರ ಅನುಭವಗಳನ್ನು ಆಲಿಸಿ ಅವರ ಅದ್ಭುತ ಪ್ರದರ್ಶನವನ್ನು ಇಡೀ ದೇಶದ ಪರವಾಗಿ ಶ್ಲಾಘಿಸಿದರು.

ಈ ವಿಶೇಷ ಭೇಟಿಯ ವೀಡಿಯೊವನ್ನು ಪ್ರಧಾನಿಯವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಅದು ಕ್ಷಣಾರ್ಧದಲ್ಲೇ ವೈರಲ್ ಆಗಿದೆ. ಈ ವೀಡಿಯೊದಲ್ಲಿ ಚಿನ್ನದ ಪದಕ ವಿಜೇತ ಬಾಕ್ಸರ್ ಸಾಕ್ಷಿ ಚೌಧರಿ ಸೇರಿದಂತೆ ಇತರ ಚಾಂಪಿಯನ್ನರೊಂದಿಗೆ ಪ್ರಧಾನಿ ಸಂವಾದ ನಡೆಸುವುದು ಕಂಡುಬಂದಿದೆ. ಸಂವಾದದಲ್ಲಿ ಸಾಕ್ಷಿ ಚೌಧರಿ ಅವರು ಪ್ರಧಾನಿಯವರ ಸರಳತೆಯನ್ನು ಶ್ಲಾಘಿಸಿ, "ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿರುವುದು ನಮಗೆ ಅತ್ಯಂತ ಸಂತೋಷ ತಂದಿದೆ" ಎಂದು ತಿಳಿಸಿದರು. ಇದೇ ವೇಳೆ ದೇಶದಲ್ಲಿ ಕ್ರೀಡಾ ಸಂಸ್ಕೃತಿಯನ್ನು ಉತ್ತೇಜಿಸುವ ಸಂದೇಶ ನೀಡಿದ ಪ್ರಧಾನಿಯವರು, "ಜೋ ಖೇಲೆಗಾ ವೋ ಖಿಲೇಗಾ (ಯಾರು ಆಡುತ್ತಾರೋ ಅವರು ಹೊಳೆಯುತ್ತಾರೆ)... ಚಿಯರ್ ಫಾರ್ ಭಾರತ್" ಎಂದು ಕರೆ ನೀಡಿ, ಕ್ರೀಡಾಪಟುಗಳೊಂದಿಗೆ 'ಭಾರತ್ ಮಾತಾ ಕಿ ಜೈ' ಘೋಷಣೆ ಕೂಗಿದರು.

2026ರ ಗ್ಲಾಸ್ಗೋ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳು 13 ಚಿನ್ನ, 17 ಬೆಳ್ಳಿ ಹಾಗೂ 9 ಕಂಚು ಸೇರಿದಂತೆ ಒಟ್ಟು 39 ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಕೂಟದಲ್ಲಿ ಭಾರತೀಯ ಬಾಕ್ಸರ್‌ಗಳ ಪ್ರದರ್ಶನ ಪ್ರಮುಖ ಆಕರ್ಷಣೆಯಾಗಿತ್ತು. ರಿಂಗ್‌ಗೆ ಇಳಿದ ಎಲ್ಲಾ 10 ಬಾಕ್ಸರ್‌ಗಳು 7 ಚಿನ್ನ ಹಾಗೂ 3 ಬೆಳ್ಳಿ ಪದಕಗಳನ್ನು ಗೆಲ್ಲುವ ಮೂಲಕ ಶೇಕಡಾ 100 ರಷ್ಟು ಯಶಸ್ಸು ಸಾಧಿಸಿ ಇತಿಹಾಸ ನಿರ್ಮಿಸಿದರು. ಬಾಕ್ಸರ್ ಸಾಕ್ಷಿ ಚೌಧರಿ ಸೇರಿದಂತೆ ಇತರ ಕ್ರೀಡಾಪಟುಗಳ ಈ ಸಾಧನೆಯು ದೇಶದ ಕ್ರೀಡಾ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.

Category
ಕರಾವಳಿ ತರಂಗಿಣಿ