image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಭಾರತ - ನ್ಯೂಜಿಲೆಂಡ್ ಮೊದಲ ಟೆಸ್ಟ್​ಗೆ ವರುಣನ ಅಡ್ಡಿ, ಮಳೆ ಲೆಕ್ಕಿಸದೇ ಜಮಾಯಿಸಿದ ಅಭಿಮಾನಿಗಳಿಗೆ ನಿರಾಸೆ

ಭಾರತ - ನ್ಯೂಜಿಲೆಂಡ್ ಮೊದಲ ಟೆಸ್ಟ್​ಗೆ ವರುಣನ ಅಡ್ಡಿ, ಮಳೆ ಲೆಕ್ಕಿಸದೇ ಜಮಾಯಿಸಿದ ಅಭಿಮಾನಿಗಳಿಗೆ ನಿರಾಸೆ

ಬೆಂಗಳೂರು: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಹಣಾಹಣಿಯ ಆರಂಭದ ದಿನದಾಟಕ್ಕೆ ಮಳೆ ಅಡ್ಡಿಯಾಗಿದೆ. ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿಗದಿಯಾಗಿರುವ ಮೊದಲ ಪಂದ್ಯದ ಟಾಸ್ ಪ್ರಕ್ರಿಯೆ ಮಳೆಯ ಕಾರಣದಿಂದ ವಿಳಂಬವಾಗಿದೆ.

ಮತ್ತೊಂದೆಡೆ, ಬೆಂಗಳೂರಿನಲ್ಲಿ ಕಳೆದ 2-3 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಪಂದ್ಯಕ್ಕೆ ಅವಕಾಶ ನೀಡುವುದೇ ಎಂಬ ಪ್ರಶ್ನೆ ಉದ್ಭವವಾಗಿದ್ದು, ಎರಡೂವರೆ ವರ್ಷಗಳ ಬಳಿಕ ಟೆಸ್ಟ್ ಪಂದ್ಯಕ್ಕೆ ಬೆಂಗಳೂರು ಆತಿಥ್ಯ ವಹಿಸುತ್ತಿದ್ದು, ಮಳೆಯ ಆತಂಕದ ನಡುವೆಯೂ ಚಿನ್ನಸ್ವಾಮಿ ಕ್ರೀಡಾಂಗಣದ ಮುಂದೆ ಅಭಿಮಾನಿಗಳು ಕಿಕ್ಕಿರಿದು ಜಮಾಯಿಸಿದ್ದಾರೆ. ಈಗಾಗಲೇ ಪಂದ್ಯದ ಐದೂ ದಿನದ ಟಿಕೆಟ್‌ಗಳು ಭಾಗಶಃ ಬಿಕರಿಯಾಗಿದ್ದವು, ಆದರೆ, ವರುಣನ ಅವಕೃಪೆ ಅಭಿಮಾನಿಗಳ ಆಸೆಗೆ ತಣ್ಣೀರೆರಚಿದೆ.

ಸತತವಾಗಿ ಮಳೆ ಬೀಳುತ್ತಿರುವ ಕಾರಣ ಮೊದಲ ದಿನದಾಟವನ್ನು ಟಾಸ್​​ ಇಲ್ಲದೇ ಮುಗಿಸಲಾಯಿತು. ಮೈದಾನದಲ್ಲಿ ನೀರು ನಿಂತಿದ್ದರಿಂದ ಮಧ್ಯಾಹ್ನ 2.30ಕ್ಕೆ ಅಂಪೈರ್​​ಗಳು ದಿನದಾಟವನ್ನು ರದ್ದು ಮಾಡಿದರು.

 

Category
ಕರಾವಳಿ ತರಂಗಿಣಿ