image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಡೆಕಥ್ಲಾನ್‌ನಲ್ಲಿ ಹೊಸ ಇತಿಹಾಸ ಬರೆದ ತೇಜಸ್ವಿನ್ ಶಂಕರ್!

ಡೆಕಥ್ಲಾನ್‌ನಲ್ಲಿ ಹೊಸ ಇತಿಹಾಸ ಬರೆದ ತೇಜಸ್ವಿನ್ ಶಂಕರ್!

ಗ್ಲ್ಯಾಸ್ಗೋ : ತೀವ್ರ ಗಾಯದ ಸಮಸ್ಯೆಯನ್ನು ಮೆಟ್ಟಿ ನಿಂತು ಹೊಸ ಇತಿಹಾಸ ಬರೆದಿರುವ ರಾಷ್ಟ್ರೀಯ ದಾಖಲೆ ವೀರ ತೇಜಸ್ವಿನ್ ಶಂಕರ್, ಕಾಮನ್‌ವೆಲ್ತ್ ಕ್ರೀಡಾಕೂಟದ ಡೆಕಥ್ಲಾನ್ ಸ್ಪರ್ಧೆಯಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎಂಬ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಎರಡು ದಿನಗಳ ಕಾಲ ನಡೆದ 10 ಕಠಿಣ ಸ್ಪರ್ಧೆಗಳ ಡೆಕಥ್ಲಾನ್ ವಿಭಾಗದಲ್ಲಿ ಒಟ್ಟು 7,976 ಅಂಕಗಳನ್ನು ಕಲೆಹಾಕಿದ 27 ವರ್ಷದ ತೇಜಸ್ವಿನ್, ಅದ್ಭುತ ಪ್ರದರ್ಶನ ನೀಡಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.

ತೀವ್ರ ಮೊಣಕಾಲು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ತೇಜಸ್ವಿನ್, ಪ್ರಸಕ್ತ ಟೂರ್ನಿಯ ಹೈಜಂಪ್ ಸ್ಪರ್ಧೆಯಿಂದ ಹೊರಗುಳಿಯಬೇಕಾಯಿತು. ಆದರೆ ಗಾಯದ ನೋವಿನ ನಡುವೆಯೂ ಡೆಕಥ್ಲಾನ್‌ನಲ್ಲಿ ಭಾಗವಹಿಸಿ ಈ ಐತಿಹಾಸಿಕ ಸಾಧನೆ ಗಿಟ್ಟಿಸಿಕೊಂಡಿದ್ದಾರೆ. ಈ ಹಿಂದೆ 2022ರ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಕ್ರೀಡಾಕೂಟದ ಹೈಜಂಪ್ ಸ್ಪರ್ಧೆಯಲ್ಲೂ ಅವರು ಕಂಚಿನ ಪದಕ ಗೆದ್ದುಕೊಂಡಿದ್ದರು. ಅಷ್ಟೇ ಅಲ್ಲದೆ, 8,057 ಅಂಕಗಳೊಂದಿಗೆ ಡೆಕಥ್ಲಾನ್‌ನಲ್ಲಿ ರಾಷ್ಟ್ರೀಯ ದಾಖಲೆಯನ್ನು ತಮ್ಮ ಹೆಸರಿನಲ್ಲೇ ಉಳಿಸಿಕೊಂಡಿದ್ದಾರೆ.

Category
ಕರಾವಳಿ ತರಂಗಿಣಿ