image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಟಿ20ಯಲ್ಲಿ ಭಾರತ ವಿಶ್ವದಾಖಲೆ: 12 ಬಾರಿ ಕ್ಲೀನ್ ಸ್ವೀಪ್ ಸಾಧನೆ!

ಟಿ20ಯಲ್ಲಿ ಭಾರತ ವಿಶ್ವದಾಖಲೆ: 12 ಬಾರಿ ಕ್ಲೀನ್ ಸ್ವೀಪ್ ಸಾಧನೆ!

ಹೈದರಾಬಾದ್ : ಝಿಂಬಾಬ್ವೆ ವಿರುದ್ಧದ ಟಿ20 ಸರಣಿಯನ್ನು 3-0 ಅಂತರದಿಂದ ವಶಪಡಿಸಿಕೊಳ್ಳುವ ಮೂಲಕ ಭಾರತ ತಂಡ ಐತಿಹಾಸಿಕ ವಿಶ್ವದಾಖಲೆ ನಿರ್ಮಿಸಿದೆ. ಕನಿಷ್ಠ 3 ಪಂದ್ಯಗಳ ಟಿ20 ಸರಣಿಯಲ್ಲಿ ಅತಿ ಹೆಚ್ಚು ಬಾರಿ ಎದುರಾಳಿ ತಂಡಗಳನ್ನು ವೈಟ್‌ವಾಶ್ (ಕ್ಲೀನ್ ಸ್ವೀಪ್) ಮಾಡಿದ ಜಗತ್ತಿನ ಏಕೈಕ ತಂಡ ಎಂಬ ಹೆಗ್ಗಳಿಕೆಗೆ ಟೀಮ್ ಇಂಡಿಯಾ ಪಾತ್ರವಾಗಿದೆ.

ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತ ತಂಡ ಇದುವರೆಗೆ ಕನಿಷ್ಠ 3 ಪಂದ್ಯಗಳ ಸರಣಿಯಲ್ಲಿ ಒಟ್ಟು 12 ಬಾರಿ ಸಂಪೂರ್ಣ ಜಯ ಸಾಧಿಸಿದೆ. ವಿಶ್ವದ ಇತರ ಯಾವುದೇ ತಂಡವೂ ಕನಿಷ್ಠ 10 ಬಾರಿಯೂ ಈ ಸಾಧನೆ ಮಾಡದಿರುವುದು ಟಿ20 ಮಾದರಿಯಲ್ಲಿ ಭಾರತದ ಆಧಿಪತ್ಯಕ್ಕೆ ಬಲವಾದ ಸಾಕ್ಷಿಯಾಗಿದೆ. ಈ ಪಟ್ಟಿಯಲ್ಲಿ ಪಾಕಿಸ್ತಾನ 8 ವೈಟ್‌ವಾಶ್ ಗೆಲುವುಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್ 5 ಬಾರಿ ಕ್ಲೀನ್ ಸ್ವೀಪ್ ಮಾಡಿ ಮೂರನೇ ಸ್ಥಾನದಲ್ಲಿದೆ.

ಟೀಮ್ ಇಂಡಿಯಾದ ಈ ಐತಿಹಾಸಿಕ ಸಾಧನೆಯಲ್ಲಿ ಮಾಜಿ ನಾಯಕ ರೋಹಿತ್ ಶರ್ಮಾ ಅವರ ನಾಯಕತ್ವ ಪ್ರಮುಖ ಪಾತ್ರ ವಹಿಸಿದೆ. ಭಾರತ ದಾಖಲಿಸಿರುವ 12 ಕ್ಲೀನ್ ಸ್ವೀಪ್‌ಗಳಲ್ಲಿ ಅರ್ಧದಷ್ಟು, ಅಂದರೆ 6 ಬಾರಿ ರೋಹಿತ್ ಅವರ ಸಾರಥ್ಯದಲ್ಲೇ ಮೂಡಿಬಂದಿವೆ. ಎಂ.ಎಸ್. ಧೋನಿ ಬಿತ್ತಿದ ಗೆಲುವಿನ ಬೀಜ, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಹೆಮ್ಮರವಾಗಿ ಬೆಳೆದಿದ್ದು, ಇದೀಗ ಯುವ ನಾಯಕರ ಸಾರಥ್ಯದಲ್ಲೂ ಭಾರತದ ಈ ವಿಜಯಯಾತ್ರೆ ಯಶಸ್ವಿಯಾಗಿ ಮುಂದುವರಿಯುತ್ತಿದೆ.

Category
ಕರಾವಳಿ ತರಂಗಿಣಿ