image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕಾಮನ್‌ವೆಲ್ತ್ ಗೇಮ್ಸ್ 2026: ಜಂಡು ಕುಮಾರ್‌ಗೆ ಕಂಚಿನ ಪದಕ

ಕಾಮನ್‌ವೆಲ್ತ್ ಗೇಮ್ಸ್ 2026: ಜಂಡು ಕುಮಾರ್‌ಗೆ ಕಂಚಿನ ಪದಕ

ಗ್ಲಾಸ್ಗೋ : ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ 2026ರ ಪುರುಷರ ಭಾರತೂಕದ ಪ್ಯಾರಾ ಪವರ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತದ ಜಂಡು ಕುಮಾರ್ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದರೊಂದಿಗೆ ಕೂಟದ 2ನೇ ದಿನದಂದು ಭಾರತಕ್ಕೆ ಮೊದಲ ಯಶಸ್ಸು ಹಾಗೂ ಪದಕ ಲಭಿಸಿದಂತಾಗಿದೆ.

ಸ್ಪರ್ಧೆಯಲ್ಲಿ ಜಂಡು ಕುಮಾರ್ ಅವರು 181 ಕೆಜಿ ಹಾಗೂ 190 ಕೆಜಿ ಭಾರವನ್ನು ಯಶಸ್ವಿಯಾಗಿ ಎತ್ತುವ ಮೂಲಕ 130.9 ಅಂಕಗಳನ್ನು ಗಳಿಸಿದರು. ಆದರೆ, ತಮ್ಮ ಅಂತಿಮ ಪ್ರಯತ್ನದಲ್ಲಿ 196 ಕೆಜಿ ಭಾರವನ್ನು ಎತ್ತಲು ಸಾಧ್ಯವಾಗದ ಕಾರಣ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಇದೇ ಸ್ಪರ್ಧೆಯಲ್ಲಿದ್ದ ನೈಜೀರಿಯಾದ ಇದ್ರಿಸ್ ರಿಲುವಾನ್ 132.8 ಅಂಕಗಳೊಂದಿಗೆ ಚಿನ್ನದ ಪದಕ ಹಾಗೂ ಮ್ಯಾಥ್ಯೂ ಹಾರ್ಡಿಂಗ್ 131 ಅಂಕಗಳೊಂದಿಗೆ ಬೆಳ್ಳಿ ಪದಕ ಪಡೆದುಕೊಂಡರು. ಮತ್ತೊಬ್ಬ ಭಾರತೀಯ ಸ್ಪರ್ಧಿ ಸುಧೀರ್ ಅವರು 114.1 ಅಂಕಗಳೊಂದಿಗೆ ಆರನೇ ಸ್ಥಾನ ಪಡೆದರು.

28 ವರ್ಷದ ಜಂಡು ಕುಮಾರ್ ಅವರು ಪೋಲಿಯೋ ಮತ್ತು ಆರ್ಥಿಕ ಸಂಕಷ್ಟಗಳಿಂದ ಸಾಕಷ್ಟು ಸವಾಲುಗಳನ್ನು ಎದುರಿಸಿದವರು. ಆರಂಭದಲ್ಲಿ ಹಲವು ವರ್ಷಗಳ ಕಾಲ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಲೇ ಅಭ್ಯಾಸ ನಿರತರಾಗಿದ್ದ ಅವರು, ಇದೀಗ ತಮ್ಮ ಪರಿಶ್ರಮವನ್ನು ಗೆಲುವಾಗಿ ಬದಲಾಯಿಸಿ ಭಾರತಕ್ಕೆ ಪದಕ ಗೆಲ್ಲಿಸಿಕೊಟ್ಟಿದ್ದಾರೆ.

Category
ಕರಾವಳಿ ತರಂಗಿಣಿ