image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಫಿಡೆ ಹಂಗಾಮಿ ಅಧ್ಯಕ್ಷರಾಗಿ ವಿಶ್ವನಾಥನ್ ಆನಂದ್ ಆಯ್ಕೆ

ಫಿಡೆ ಹಂಗಾಮಿ ಅಧ್ಯಕ್ಷರಾಗಿ ವಿಶ್ವನಾಥನ್ ಆನಂದ್ ಆಯ್ಕೆ

ಹೊಸದಿಲ್ಲಿ : ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರು ವಿಶ್ವ ಚೆಸ್ ಒಕ್ಕೂಟದ (ಫಿಡೆ) ಹಂಗಾಮಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 2002 ರಿಂದ ಫಿಡೆ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಆನಂದ್ ಅವರು ಇದೀಗ ಈ ಉನ್ನತ ಹುದ್ದೆಯನ್ನು ವಹಿಸಿಕೊಂಡಿದ್ದಾರೆ. ಇಲ್ಲಿಯವರೆಗೆ ಫಿಡೆ ಅಧ್ಯಕ್ಷರಾಗಿದ್ದ ರಷ್ಯಾದ ಅರ್ಕಾಡಿ ಡ್ವೋರ್ಕೋವಿಚ್ ಅವರ ಹೆಸರು ರಷ್ಯಾ-ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದಂತೆ ಯುರೋಪಿಯನ್ ಯೂನಿಯನ್‌ನ (ಇಯು) ನಿರ್ಬಂಧಿತ ವ್ಯಕ್ತಿಗಳ ಪಟ್ಟಿಗೆ ಸೇರ್ಪಡೆಯಾದ ಕಾರಣ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇಯು ಕೈಗೊಂಡ ಈ ನಿರ್ಧಾರದಿಂದಾಗಿ ಡ್ವೋರ್ಕೋವಿಚ್ ಅವರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದ್ದು, ಅವರ ಪ್ರಯಾಣದ ಮೇಲೆಯೂ ನಿರ್ಬಂಧ ಹೇರಲಾಗಿದೆ. ಈ ಮಧ್ಯೆ, ಯುರೋಪಿಯನ್ ಯೂನಿಯನ್‌ನ ಈ ನಿರ್ಧಾರವನ್ನು ಪ್ರಶ್ನಿಸಲು ಅರ್ಕಾಡಿ ಡ್ವೋರ್ಕೋವಿಚ್ ಮುಂದಾಗಿದ್ದಾರೆ.

Category
ಕರಾವಳಿ ತರಂಗಿಣಿ